• Slide
    Slide
    Slide
    previous arrow
    next arrow
  • ಕೋವಿಡ್ ನಿಯಮ ಗಾಳಿಗೆ ತೂರಿ ಹೋರಿ ಬೆದರಿಸುವ ಸ್ಪರ್ಧೆ

    300x250 AD

    ಮುಂಡಗೋಡ: ತಾಲೂಕಿನ ಕೋಡಂಬಿ ಗ್ರಾಮದಲ್ಲಿ ಮಂಗಳವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿರುವುದು ಕಂಡು ಬಂದಿತು.


    ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಸರಕಾರ ನೈಟ್ ಕರ್ಫ್ಯೂ ಜಾರಿ ಮಾಡಿತು. ಅಲ್ಲದೆ ಸಭೆ, ಸಮಾರಂಭಗಳಲ್ಲಿ ನಿಯಮಿತವಾಗಿ ಜನರು ಸೇರಬೇಕು ಎಂದು ಕಟ್ಟುನಿಟ್ಟಾಗಿ ನಿಯಮ ಜಾರಿಗೆ ತಂದಿತು. ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಂದು ಕಡೆ ಸೇರದಂತೆ ಮುಂಜಾಗ್ರತೆ ವಹಿಸುವಂತೆಸೂಚಿಸಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಹೇಳಿದೆ. ಆದರೆ ಸರಕಾರದ ಕೋವಿಡ್ ನಿಯಮ ಮಾತ್ರ ಕೋಡಂಬಿ ಗ್ರಾಮದಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿದ್ದ ಜನರಿಗೆ ಮಾತ್ರ ಅನ್ವಯಿಸಲಿಲ್ಲ.

    ಸುಮಾರು ಇಪ್ಪತ್ತು ಸಾವಿರಕ್ಕೂ ಅಧಿಕ ಜನರು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸೇರಿದ್ದರು. ಉತ್ತರಕನ್ನಡ, ಧಾರವಾಡ, ಹಾವೇರಿ, ಶಿವಮೊಗ್ಗ ಜಿಲ್ಲೆ ಹಾಗು ವಿವಿಧ ಭಾಗಗಳಿಂದ ಜನರು ಹೋರಿಗಳನ್ನು ಸ್ಪರ್ಧೆಗೆ ತಂದಿದ್ದರು. ಅವರ ಜೊತೆಗೆ ಸ್ಪರ್ಧೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸಮೂಹ ಸೇರಿರುವುದು ಕಂಡು ಬಂದಿತು. ಮಾಸ್ಕ್ ಹಾಗೂ ಸಾಮಾಜಿಕ ಅಂತರವು ಮಾತ್ರ ಎಲ್ಲಿಯೂ ಕಂಡು ಬರಲಿಲ್ಲ.

    300x250 AD


    ಅಧಿಕಾರಿಗಳು ಮೌನ: ಇಪ್ಪತ್ತು ಸಾವಿರಕ್ಕೂ ಅಧಿಕ ಜನರು ದನ ಬೇದರಿಸುವ ಕಾರ್ಯಕ್ರಮದಲ್ಲಿ ಸೇರುತ್ತಾರೆ ಇಷ್ಟೊಂದು ಜನಸಮೂಹ ಸೇರಿರುವುದು ತಹಸೀಲ್ದಾರ್ ಅವರಿಗೆ ಗೊತ್ತಾಗಲಿಲ್ಲವೇ? ಈ ಬಗ್ಗೆ ಪೆÇಲೀಸ್ ಇಲಾಖೆಗೂ ಗೊತ್ತೀಲ್ಲವೆ? ಕಳೆದ ಒಂದು ತಿಂಗಳ ಹಿಂದೆಯೆ ದನ ಬೇದರಿಸುವ ಸ್ಪರ್ಧಯ ಕರ ಪತ್ರಗಳನ್ನು ಮುದ್ರಿಸಿ ಹಲವಾರು ಜಿಲ್ಲೆಗಳಲ್ಲಿ ಹಂಚಿಕೆ ಮಾಡಲಾಗಿದೆ. ಆದರೂ ಸಹ ತಾಲೂಕಿನ ಅಧಿಕಾರಿಗಳಿಗೆ ಈ ವಿಷಯ ಗೊತ್ತಾಗಲಿಲ್ಲವೆ? ಎಂಬ ಮಾತುಗಳು ಪ್ರಜ್ಞಾವಂತರಿಂದ ಕೇಳಿ ಬರುತ್ತಿವೆ. ಕೊಡಂಬಿಯಲ್ಲಿ ಇಪ್ಪತ್ತು ಸಾವಿರ ಜನರು ಬೆಳಗ್ಗೆಯಿಂದ ಸಂಜೆಯ ವರೆಗೂ ಜಮಾಯಿಸಿದ್ದು ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೆ? ಅಥವಾ ಗೊತ್ತಿದ್ದರು ಸಹ ಜಾಣ ಕುರುಡತನ ಪ್ರದರ್ಶಿಸಿದರೆ? ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಿ ಕೂಡಲೆ ತಪ್ಪಿಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದು ಅವಶ್ಯವಿದೆ.

    ತಹಶೀಲ್ದಾರ ಶ್ರೀಧರ ಮುಂದಲಮನೆ: ದನ ಬೇದರಿಸುವ ಕಾರ್ಯಕ್ರಮಕ್ಕೆ ನಾವು ಯಾವೂದೆ ಪರವಾನಿಗೆ ನೀಡಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಜನ ಸೇರಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪಾಳಾ ಗ್ರಾಮ ಲೇಕ್ಕಾಧಿಕಾರಿ ಹಾಗೂ ಕೊಡಂಬಿ ಪಂಚಾಯತ ಪಿಡಿಒ ಅವರ ನೋಟೀಸ್ ಜಾರಿ ಮಾಡುತ್ತೇವೆ.

    ಸಿ.ಪಿ.ಐ ಸಿದ್ದಪ್ಪ.ಎಸ್.ಸಿಮಾನಿ: ನಾನು ಮೂರು ದಿನಗಳ ಹಿಂದೆಯೆ ಹೋನ್ನಾವರ ತಾಲೂಕಿಗೆ ಬಂದೂಬಸ್ತ್ ಕೆಲಸಕ್ಕೆ ಬಂದಿದ್ದೆನೆ ಕೊಡಂಬಿ ಗ್ರಾಮದಲ್ಲಿ ದನ ಬೇದರಿಸುವ ಕಾರ್ಯಕ್ರಮದಲ್ಲಿ ಜನ ಸೇರಿರುವುದು ನನ್ನ ಗಮಕ್ಕೆ ಬಂದಿಲ್ಲ ನಮ್ಮ ಸಿಬ್ಬಂದಿಗಳಿಗೆ ಈ ಬಗ್ಗೆ ಮಾಹಿತಿ ನೀಡುತ್ತೇನೆ.

    Share This
    300x250 AD
    300x250 AD
    300x250 AD
    Leaderboard Ad
    Back to top