ಶಿರಸಿ: ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ದೇವನಳ್ಳಿ ರಾಗಿಬೈಲ್ ಮೈದಾನದಲ್ಲಿ ಸಹಕಾರಿ ಕ್ರಿಕೆಟ್ ಟ್ರೋಫಿ ಜನವರಿ 26ರಂದು ನಡೆಯಿತು.
ಉದ್ಘಾಟಕರಾಗಿ ಶಿರಸಿ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹಾಗೂ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಟಿ ಎಂ ಎಸ್ ಉಪಾಧ್ಯಕ್ಷರಾಗಿರುವ ಎಂ.ಪಿ.ಹೆಗಡೆ ಕೊಟ್ಟೆಗದ್ದೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಪಿ.ಹೆಗಡೆ ಉತ್ತರ ಕನ್ನಡದ ಎಲ್ಲಾ ಸಂಘಗಳು ಕ್ರಿಕೆಟ್ ಟೂರ್ನಮೆಂಟ್’ನಲ್ಲಿ ಭಾಗವಹಿಸುವಂತಾಗಲಿ, ಬರುವ ದಿನಗಳಲ್ಲಿ ಸಹಕಾರಿ ಕ್ಷೇತ್ರ ಒಗ್ಗಟ್ಟಾಗಿ ಬಲಗೊಳ್ಳಲಿ ಎಂದರು.
ಟೂರ್ನಮೆಂಟ್ ನಲ್ಲಿ ಟಿ ಎಂ ಎಸ್ ಯಲ್ಲಾಪುರ, ಕಾನಗೊಡು, ಹುಳಗೊಳ, ಕದಂಬ ಮಾರ್ಕೆಟಿಂಗ್, ಟಿ ಎಂ ಎಸ್ ಶಿರಸಿ, ಹಾರುಗಾರ, ಹೆಗಡೆಕಟ್ಟಾ, ಮತ್ತಿಘಟ್ಟ ಸೇರಿದಂತೆ ಹತ್ತಕ್ಕು ಹೆಚ್ಚು ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಯಲ್ಲಾಪುರ ಟಿ ಎಂ ಎಸ್ ತಂಡವು ಹಾರುಗಾರ ತಂಡವನ್ನು ಎದುರಿಸಿ 8 ವಿಕೆಟ್ ಗಳಿಂದ ಗೆಲುವು ಸಾಧಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಆರಂಭದಲ್ಲಿ ಜಿ ಎಂ ಹೆಗಡೆ, ಎಂ.ಪಿ.ಹೆಗಡೆ ಗಣ್ಯರು ಕ್ರಿಕೆಟ್ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಗಮನಸೆಳೆದರು. ಕದಂಬ ಮಾರ್ಕೆಟಿಂಗ್ ನ ವಿಶ್ವೇಶ್ವರ ಭಟ್, ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ಎಂ ಎ ಹೆಗಡೆ, ಹೆಗಡೆಕಟ್ಟಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ ಹೆಗಡೆ, ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು ಪ್ರಸನ್ನ ಭಟ್ಟ, ಪ್ರಭಾಕರ ಹೆಗಡೆ, ವನಿತಾ ಹೆಗಡೆ ಟಿಎಂಎಸ್ ಕೃಷಿ ತಜ್ಞ ಕಿಶೋರ ಹೆಗಡೆ, ಮತ್ತಿಘಟ್ಟ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ವಿ.ಆರ್.ಹೆಗಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಹೆಗಡೆಕಟ್ಟಾ ಸೊಸೈಟಿ ಟ್ರೋಫಿಯನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು ಶ್ಲಾಘನೆಗೆ ಒಳಗಾಯಿತು.