ಶಿರಸಿ: ದಿ ತೋಟಗಾರ್ಸ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿಯ ಕೃಷಿ ಸುಪರ್ ಮಾರ್ಕೆಟ್ ವಿಭಾಗದಲ್ಲಿನ ಟಿ.ಎಸ್.ಎಸ್. ಗ್ರೀನ್ ಗೋಲ್ಡ್ ಗೊಬ್ಬರ, ಟಿ.ಎಸ್.ಎಸ್. ಕೃಷಿಮಿತ್ರ ಗೊಬ್ಬರ ಹಾಗೂ ಟಿ.ಎಸ್.ಎಸ್. ಅನ್ನಪೂರ್ಣ ಗೊಬ್ಬರ ಖರೀದಿ ಮೇಲಿನ ಕೂಪನ್‍ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ಮೂಲಕ ವಿಜೇತರುಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮವನ್ನು ಜ.26 ಗುರುವಾರ ಸಂಘದ ಆವಾರದಲ್ಲಿ ನಡೆಸಲಾಯಿತು.
ಸಂಘದ ಕೃಷಿ ವಿಭಾಗದಲ್ಲಿ 15 ಅಗಸ್ಟ್ 2021 ರಿಂದ ಡಿಸೆಂಬರ್ 31ರ ವರೆಗೆ ಟಿ.ಎಸ್.ಎಸ್. ಗ್ರೀನ್ ಗೋಲ್ಡ್ ಗೊಬ್ಬರ, ಟಿ.ಎಸ್.ಎಸ್. ಕೃಷಿಮಿತ್ರ ಗೊಬ್ಬರ ಹಾಗೂ ಟಿ.ಎಸ್.ಎಸ್. ಅನ್ನಪೂರ್ಣ ಗೊಬ್ಬರ ಖರೀದಿಸಿದ ಗ್ರಾಹಕರಿಗೆ ಪ್ರತಿ 2 ಚೀಲಕ್ಕೊಂದು ನೀಡಲಾಗಿದ್ದ ಕೂಪನ್‍ಗಳನ್ನು ಸಂಗ್ರಹಿಸಿ ಲಕ್ಕಿ ಡ್ರಾ ಮಾಡುವ ಮೂಲಕ 65 ಕ್ಕೂ ಹೆಚ್ಚಿನ ವಿಜೇತರುಗಳನ್ನು ಆಯ್ಕೆ ಮಾಡಲಾಯಿತು.
ಮೊದಲನೇ ಬಹುಮಾನವಾದ ಇಲೆಕ್ಟ್ರಿಕ್ ಬೈಕ್ ವಿಜೇತರಾಗಿ ವಿನಾಯಕ ಮಂಜುನಾಥ ಹೆಗಡೆ ಮೂರೂರು, ಎರಡನೇ ಬಹುಮಾನವಾದ 32” ಸ್ಮಾರ್ಟ ಎಲ್‍ಇಡಿ ಟಿ.ವಿ. ವಿಜೇತರಾಗಿ ಸುಬ್ರಾಯ ರಾಮಚಂದ್ರ ಹೆಗಡೆ ಗುಂಡಿಗದ್ದೆ, ಮೂರನೇ ಬಹುಮಾನ ವೀಡ್ ಕಟರ್ ವಿಜೇತರಾಗಿ ರಾಘವೇಂದ್ರ ಶ್ರೀನಿವಾಸ ಗಾಣಿಗ ಹೆಬ್ಬತ್ತಿ, ನಾಲ್ಕನೇ ಬಹುಮಾನವಾದ ಏರ್ ಗನ್ ವಿಎಕ್ಸ್100 ವಿಜೇತರುಗಳಾಗಿ ಮುಕುಂದ ಯಲ್ಲಾಪುರ ಹಾಗೂ ಐದನೇ ಬಹುಮಾನವಾದ ಹೈ ಪ್ರೆಶರ್ ವಾಶರ್ ವಿಜೇತರಾಗಿ ಅನಂತ ನಂಜುಂಡ ಸ್ವಾದಿ ಸೋಂದಾ ಇವರುಗಳು ಆಯ್ಕೆಯಾಗಿರುತ್ತಾರೆ.
ಇನ್ನುಳಿದ 60ಕ್ಕೂ ಹೆಚ್ಚಿನ ವಿಜೇತರುಗಳು ಆಯ್ಕೆಯಾಗಿರುತ್ತಿದ್ದು, ಸದರಿ ಬಹುಮಾನ ವಿಜೇತರುಗಳ ಯಾದಿಯನ್ನು ಸಂಘದ ವಾಟ್ಸ್‍ಪ್ ಮೂಲಕ ಪ್ರಕಟಿಸಲಾಗುವುದು. ವಿಜೇತ ಶಾಲಿಗಳು ಸಂಘದ ಪ್ರಧಾನ ಕಛೇರಿಯ ಕೃಷಿ ವಿಭಾಗದಲ್ಲಿ ಹಾಗೂ ಶಾಖೆಗಳಲ್ಲಿ ಬಹುಮಾನವನ್ನು ಪಡೆಯಬೇಕೆಂದು ಕೋರಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಹಾಗೂ ಆಡಳಿತ ಮಂಡಳಿ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು, ಸಿಬ್ಬಂದಿಗಳು, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.