ಯಲ್ಲಾಪುರ: ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೈಲಂದೂರ ಗೌಳಿವಾಡದಲ್ಲಿ73ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಎಸ್. ಡಿ. ಎಂ. ಸಿ ಅಧ್ಯಕ್ಷ ರಾದ ಬಕ್ಕು ಥೋರತ್ ಅವರು ಧ್ವಜಾರೋಹಣ ನಡೆಸಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ದಾಕ್ಲು ಬಾಗು ಪಟಕಾರೆ ಅವರು ಶಾಲೆಗೆ ಟಿ. ವಿ ಹಾಗೂ ಧ್ವನಿವರ್ಧಕ ವನ್ನು ದೇಣಿಗೆ ಯಾಗಿ ನೀಡಿದರು. ಮಕ್ಕಳಿಂದ ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗ್ರಾಮ ಪಂಚಾಯಿತಿ ಸದಸ್ಯ ರಾದ ಶ್ರೀಮತಿ ಲಕ್ಕಿಬಾಯಿ ಬಾಗು ಪಟಕಾರೆ, ಮಹೇಶ ಪೂಜಾರ, ಮುಖ್ಯೋಪಾಧ್ಯಾಯರಾದ ನಾರಾಯಣ ಜಿ ಕಾಂಬಳೆ, ಜಾವು ಪಟಕಾರೆ, ಬಾಪು ಥೋರತ್, ಶ್ಯಾಮು ತಾಟೆ,ರುಸ್ತುಂ ಹೊಸಳ್ಳಿ, ಮಂಗಲಾ ವಡ್ಡರ, ಬಜ್ಜು ತಾಟೆ, ಬಾಬು ಥೋರತ್ ವಿಠ್ಠಲ ಎಡಗೆ, ಹಾಗೂ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಶಿಕ್ಷಕರಾದ ನಾಗರಾಜ ಎಮ್ ಹುಡೇದ ಕಾರ್ಯಕ್ರಮ ನಿರೂಪಿಸಿದರು.