ಗೋಕರ್ಣ: ನೆಲಗುಣಿಯ ಮೊಡರ್ನ ಎಜ್ಯುಕೇಶನ್ ಟ್ರಸ್ಟ್ ನ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಮೊಡರ್ನ ಎಜ್ಯುಕೇಶನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 73ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಸಂವಿಧಾನದ ಪಿತಾಮಹ ಭಾರತರತ್ನ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿಜಿಯವರ ಭಾವಚಿತ್ರವಿಟ್ಟು ಪುಷ್ಪಾರ್ಚನೆ ಮಾಡಲಾಯಿತು.
ಆಡಳಿತ ಮಂಡಳಿಯ ಮೆನೆಜಿಂಗ್ ಟ್ರಸ್ಟಿಯಾದ ಡಾ.ಎಂ.ಡಿ.ನಾಯ್ಕ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಮಹತ್ವವನ್ನು ಉದ್ದೇಶಿಸಿ ಮಾತನಾಡಿದರು. ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಶಾಲಾ ಅಕಾಡೆಮಿಕ್ ಡೈರೆಕ್ಟರ್ ಮಂಜುನಾಥ ಹಿತ್ತಲ್ಮಕ್ಕಿ, ಮುಖ್ಯಾಧ್ಯಾಪಕ ರಾಜೇಶ ಗೋನ್ಸಾಲ್ವೀಸ್, ಶಿಕ್ಷಕವೃಂದದವರು, ಶಿಕ್ಷಕೇತರ ಸಿಬ್ಬಂದಿಗಳು, ಹಾಗೂ ಪಾಲಕರು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಕ ನಿತ್ಯಾನಂದ ಗೌಡ ಗಣರಾಜ್ಯೋತ್ಸವದ ಪೂರ್ವ ತಯಾರಿ, ಸಿದ್ಧತೆಯನ್ನು ನಡೆಸಿ ಕಾರ್ಯಕ್ರಮಕ್ಕೆ ಯಶಸ್ಸನ್ನು ತಂದು ಕೊಟ್ಟರು.