ಶಿರಸಿ:ತಾಲೂಕಿನ ಮರಾಠಿಕೊಪ್ಪದ ಸುಭಾಷನಗರದಲ್ಲಿರುವ ಅಜಿತ ಮನೋಚೇತನಾ ಟ್ರಸ್ಟ್ (ರಿ) ಇವರು ನಡೆಸುತ್ತಿರುವ ವಿಕಾಸ ವಿಶೇಷ ಮಕ್ಕಳ ಶಾಲೆಯಲ್ಲಿ 73 ನೇ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣದ ಕಾರ್ಯಕ್ರಮವನ್ನು ಟ್ರಸ್ಟ್‍ನ ಕಾರ್ಯದರ್ಶಿಗಳಾದ ಅನಂತ ಹೆಗಡೆ ಅಶೀಸರ ಇವರು ನಡೆಸಿಕೊಟ್ಟರು. ಧ್ವಜಾರೋಹಣದ ನಂತರ ಮಕ್ಕಳು ಮತ್ತು ಶಿಕ್ಷಕರು ಸುಶ್ರಾವ್ಯವಾಗಿ ರಾಷ್ಟ್ರಗೀತೆಯನ್ನು ಹಾಗೂ ದೇಶ ಭಕ್ತಿಗೀತೆಗಳನ್ನು ಹಾಡಿದರು.
ಧ್ವಜಾರೋಹಣವನ್ನು ನೆಡೆಸಿಕೊಟ್ಟ ಅನಂತ ಹೆಗಡೆ ಅಶೀಸರ ರವರು ಮಾತಾನಾಡುತ್ತಾ, ಸಂಸ್ಥೆಯ 25ನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಇನ್ನಷ್ಟು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಚರಿಸೋಣ ಆ ದಿಕ್ಕಿನಲ್ಲಿ ಸಕಲ ಸಿದ್ದತೆ ನಡೆಸೋಣ ಎಂದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡ ಡಾ. ಪಿ ಎಸ್ ಹೆಗಡೆ .ಅಜ್ಜಿಬಾಳ ಇವರು ವಿಕಲಚೇತನರ ಸೇವೆ ಇದೊಂದು ರಾಷ್ಟ್ರ ಸೇವೆ ಎಂದು ಶುಭ ಹಾರೈಸಿದರು ಮೊಮ್ಮಗಳ ಜನ್ಮ ದಿನದ ಪ್ರಯುಕ್ತ ಮಕ್ಕಳಿಗೆ ಸಿಹಿ ವಿತರಿಸಿದರು.
ಈ ಶುಭಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು, ಶಾಲೆಯ ಮಕ್ಕಳು, ಶಿಕ್ಷಕವೃಂದ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು