• Slide
  Slide
  Slide
  previous arrow
  next arrow
 • ಉತ್ತಮ ಪ್ರತಿನಿಧಿಗಳನ್ನು ಆಯ್ಕೆಗೊಳಿಸಿದರೆ ಉತ್ತಮ ಆಡಳಿತ ಕಾಣಲು ಸಾಧ್ಯ: ಸಿ.ರಾಜಶೇಖರ

  300x250 AD

  ಕಾರವಾರ: ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದಾಗ ಮಾತ್ರ ಉತ್ತಮ ಪ್ರತಿನಿಧಿಗಳನ್ನು ಆಯ್ಕೆಗೊಳಿಸಿ ಉತ್ತಮ ಆಡಳಿತ ಕಾಣಲು ಸಾಧ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸಿ. ರಾಜಶೇಖರ ಹೇಳಿದರು.

  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ 12ನೇ ರಾಷ್ಡ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನವು ಉತ್ತಮ ವೇದಿಕೆಯಾಗಿರುತ್ತದೆ. ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಆದರೆ ನಾವು ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತೆವೆ. ಹಕ್ಕುಗಳ ಜೋತೆಗೆ ಕರ್ತವ್ಯ ನಿಭಾಯಿಸುವುದು ಕೂಡಾ ಮುಖ್ಯವಾಗಿದೆ. 2011 ರಿಂದ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಇದರ ಮೂಲ ಉದ್ದೇಶ ಯುವ ಮತದಾರರನ್ನು ಉತ್ತೇಜಿಸುವುದಾಗಿದೆ. ರಾಜಕೀಯ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದೆಂದರೆ ರಾಜಕಾರಣಿಯೇ ಆಗಬೇಕೆಂದಿಲ್ಲ. ಮತದಾನ ಮಾಡಿ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡುವುದಾಗಿರುತ್ತದೆ. ಇಂದು ಚುನಾವಣಾ ಗುರುತಿನ ಚಿಟಿ ಪಡೆದಂತಹ ಯುವ ಮತದಾರರು ಕೇವಲ ಮೊದಲ ಬಾರಿ ಮತ ಚಲಾಯಿಸಿದವರು ಅನ್ನುವಂತಹ ಪ್ರಚಾರಗಳಿಗೆ ಒಳಗಾಗದೇ ಮತದಾನ ಪ್ರಕ್ರೀಯೆಯಲ್ಲಿ ನಿರಂತವಾಗಿ ಭಾಗವಹಿಸಬೇಕು ಎಂದರು.

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಮಾತನಾಡಿ, ಇತರೆ ರಾಷ್ಟ್ರಗಳಲ್ಲಿ ಅನೇಕ ಹೋರಾಟ ನಡೆಸಿದ ನಂತರವೇ ಜನಸಾಮನ್ಯರು, ಮಹಿಳೆಯರು, ಕಪ್ಪು ಜನಾಂಗದವರಿಗೆ ಮತ ಚಲಾಯಿಸುವ ಹಕ್ಕನ್ನು ನೀಡಲಾಗಿರುತ್ತದೆ. ನಮ್ಮ ಭಾರತೀಯ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಮತದಾನಕ್ಕೆ ಅವಕಾಶ ನೀಡಿದೆ. ಯಾವುದೇ ಹೋರಾಟವಿಲ್ಲದೆ ಮತದಾನ ಪ್ರಕ್ರೀಯೆಯಲ್ಲಿ ಭಾಗವಹಿಸಲು ದೊರೆತಿರುವದರಿಂದ ಅದರ ಮಹತ್ವವನ್ನು ಜನರು ಮರೆತಿದ್ದಾರೆ. ಪ್ರತಿ ಮತವು ಮಹತ್ವದ್ದಾಗಿದ್ದು, ಅದರ ಮಹತ್ವವನ್ನರಿತು ಪ್ರತಿಯೊಬ್ಬರು ಮತ ಚಲಾಯಿಸಬೇಕು. ದೇಶದಲ್ಲಿ ಮೊದಲ ಮತದಾನ ಪ್ರಕ್ರಿಯೆ ಸುಮಾರು ಆರು ತಿಂಗಳವರೆಗೆ ನಡೆದಿತ್ತು. ಮಹಿಳೆಯರು ತನ್ನ ಗಂಡ ಅಥವಾ ತಂದೆಯ ಹೆಸರಿನ ಮೂಲಕ ಮತ ಚಲಾಯಿಸಿ ಬರುವಂತಹ ಸನ್ನಿವೇಶವಿತ್ತು. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗೆ ಚುನಾವಣಾ ಆಯೋಗ ನಿರಂತರವಾಗಿ ಹಲವಾರು ಕ್ರಮಗಳನ್ನು ಕೈಗೊಂಡಿರುತ್ತದೆ. ಭಾರತ ಚುನಾವಣಾ ಆಯೋಗವು ನಮ್ಮ ಹೆಮ್ಮೆ ಅಂತಲೇ ಹೇಳಬೇಕು. ಇಂದು ಗುಡ್ಡಗಾಡು ಪ್ರದೇಶಗಳಲ್ಲೂ ಮತ ಚಲಾಯಿಸಿರುವದನ್ನು ನೋಡಿದಾಗ ಅದರ ಪ್ರಾಮುಖ್ಯತೆ ಏನೆಂಬುದು ತಿಳಿಯುತ್ತದೆ ಎಂದರು.

  300x250 AD

  ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು. ಚುನಾವಣಾ ಕಾರ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್‍ಒ ಹಾಗೂ ಸಿಬ್ಬಂದಿಗಳಾದ ಶೀಲಾ ನಾಯ್ಕ, ಸಂತೋಷ ಗಾಂವಕರ, ಸುಮಂಗಲಾ ನಾಯ್ಕ, ರಾಜಾಸಾಬ ದೆಂಗನ್ನವರ, ಮಹದೇವ ರಾಣೆ ಇವರನ್ನು ಸನ್ಮಾನಿಸಲಾಯಿತು. ಹಿಂದು ಹೈಸ್ಕೂಲ್‍ನ ಮುಖ್ಯ ಶಿಕ್ಷಕ ಅರುಣ ರಾಣೆ ಹಾಗೂ ಸಂಗಡಿಗರು ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು

  ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ ಬೋಧಿಸಿದರು.ಸಹಶಿಕ್ಷಕ ಮಾಧವ ರಾಣೆ ನಿರೂಪಿಸಿದರು. ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೊಡ್ ವಂದಿಸಿದರು.
  ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಾಹಾಂತೇಶ ದರ್ಗದ್, ಜಿಲ್ಲಾ ಪಂಚಾಯತ್ ಕಾರ್ಯಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಮ್, ಪ್ರೋಬೇಶನರಿ ಐ.ಎ.ಎಸ್ ಅಧಿಕಾರಿ ಅವಿನಾಶ ಸಿಂಧೆ ಸೆರಿದಂತೆ ಇತರರು ಇದ್ದರು. ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top