ಹೊನ್ನಾವರ: ಹೆಣ್ಣೆಂದರೆ ತಿರಸ್ಕಾರ ಮನೋಭಾವನೆ ಹೊಂದುತ್ತಾರೆ, ಹೆಣ್ಣು ಭ್ರೂಣ ಹತ್ಯೆ ,ಶಿಶು ಹತ್ಯೆಯಂತಹ ಪಾಪಕಾರ್ಯ ನಡೆಸುತ್ತಾರೆ.ಇಂತಹ ಕೃತ್ಯಗಳು ತೊಲಗಬೇಕು,ಹೆಣ್ಣಿನ ಬಗ್ಗೆ ಗೌರವ ಭಾವನೆ ಹೊಂದಬೇಕು ಎಂದು ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಶ್ ಕಿಣಿ ಅಭಿಪ್ರಾಯಪಟ್ಟರು.
ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಇಲ್ಲಿನ ರೋಟರಿಕ್ಲಬ್ ವತಿಯಿಂದ ತಾಲೂಕಾಸ್ಪತ್ರೆಯಲ್ಲಿ ಜನಿಸಿದ ಹೆಣ್ಣುಮಗುವಿಗೆ ಹಾಗೂ ಅವರ ತಾಯಿಗೆ ಅವಶ್ಯಕ ಕಿಟ್ ವಿತರಿಸಿ ಅವರು ಮಾತನಾಡಿದರು.ಹೆಣ್ಣು ಭ್ರೂಣ ಹತ್ಯೆ ಬಗ್ಗೆ ತಂದೆ-ತಾಯಂದಿರಿಗೆ ತಿಳುವಳಿಕೆ ನೀಡುವುದು ಅಗತ್ಯ. ಒಂದು ಹೆಣ್ಣು ಕಲಿತರೆ ಸಮಾಜವೇ ಕಲಿತಂತೆ. ಹೆಣ್ಣನ್ನು ಪ್ರಭುದ್ಧತೆಯಾಗಿ ಬೆಳೆಸಲು ತಾಯಿ ಪಾತ್ರ ಹೆಚ್ಚಾಗಿರುತ್ತದೆ. ಹೆಣ್ಣು ಭ್ರೂಣ ಹತ್ಯೆ ,ಶಿಶು ಹತ್ಯೆಯಂತಹ ಕೃತ್ಯ ಸಮಾಜದಿಂದ ತೊಲಗಬೇಕೆಂದರೆ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆಯಂತಹ ಕಾರ್ಯಕ್ರಮ ಅವಶ್ಯಕವಾಗಿದೆ ಎಂದರು. ದಿನಾಚರಣೆಯಂದೆ ತಾಲೂಕಾಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನನವಾಗಿರುವುದು ಖುಷಿ ತಂದಿದೆ ಎಂದು,ತಾಯಿ ಮಗುವಿಗೆ ಶುಭ ಹಾರೈಸಿದರು.