ಶಿರಸಿ: ದಿ.ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ.,ಶಿರಸಿ ಇವರ ಆಶ್ರಯದಲ್ಲಿ ಎರಡು ದಿನಗಳ ‘ಅಡಿಕೆ ದೋಟಿ ಕೌಶಲ್ಯ ತರಬೇತಿ’ ಶಿಬಿರ ಜ.27 ಗುರುವಾರ ಬೆಳಿಗ್ಗೆ 10.30 ಕ್ಕೆ ನೀರ್ನಳ್ಳಿ ಸೀತಾರಾಮ ಹೆಗಡೆ ಇವರ ತೋಟದಲ್ಲಿ ನಡೆಯಲಿದೆ.
ಈ ದೋಟಿ ಮೂಲಕ ಕೊಯ್ಲು ಮತ್ತು ಸಿಂಪಡನೆ ತರಬೇತಿ ಶಿಬಿರದ ಅಧ್ಯಕ್ಷತೆ ಹಾಗೂ ಉದ್ಘಾಟನೆಯನ್ನು ಟಿಎಸ್‍ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ ವಹಿಸುವರು. ಟಿಎಸ್‍ಎಸ್ ಲಿಮಿಟೆಡ್ ನಿರ್ದೇಶಕ ಸೀತಾರಾಮ ಹೆಗಡೆ ನೀರ್ನಳ್ಳಿ, ಟಿಎಸ್‍ಎಸ್’ನ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಉಪಸ್ಥಿತರಿರುವರು. ಅತಿಥಿಗಳಾಗಿ ಉಮಾನಂದ ಭಟ್ಟ ಕೊಡ್ಲಳ್ಳಿ ಇರುವರು.