• Slide
    Slide
    Slide
    previous arrow
    next arrow
  • ಮಳಗಿ ಇಂದಿರಾ ಗಾಂಧಿ ವಸತಿ ಶಾಲೆಗೆ ಜಿ.ಪಂ ಸಿಇಒ ಪ್ರಿಯಾಂಗ್ ಎಂ ಭೇಟಿ; ಶಾಲಾ ಪರಿಸ್ಥಿತಿ ಬಗ್ಗೆ ಬೇಸರ

    300x250 AD

    ಮುಂಡಗೋಡ: ತಾಲೂಕಿನ ಮಳಗಿ ಗ್ರಾಮದಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಕೊಠಡಿಗಳ ಕೊರತೆಯಿಂದ ಮಕ್ಕಳು ತೊಂದರೆ ಅನುಭವಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ್ ಎಂ. ಸೋಮವಾರ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಕಂಡು ಬೇಸರ ವ್ಯಕ್ತ ಪಡಿಸಿದರು.


    ಡಿಗೆ ಕಟ್ಟಡದಲ್ಲಿರುವ ವಸತಿ ಶಾಲೆಯಲ್ಲಿ ಸಣ್ಣ ಕೊಠಡಿಗಳಿದ್ದು ಶಾಲೆ ಹಾಗೂ ವಸತಿ ನಿಲಯ ಒಂದೆ ಕಟ್ಟಡದಲ್ಲಿ ನಡೆಸಲು ಸಾದ್ಯವಾಗದ ಕಾರಣ ಎರಡು ಕಡೆಗಳಲ್ಲಿ ವಸತಿ ನಿಲಯ ಒಂದು ಕಡೆ ತರಗತಿಯನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಅಲ್ಲದೆ ಬಾಲಕರು ದೇವಸ್ಥಾನದ ಸಭಾ ಭವನದಲ್ಲಿ ಮಲಗುತ್ತಿರುವ ವಿಷಯ ತಿಳಿದು ಹಿನ್ನಲೆಯಲ್ಲಿ ಶಾಲೆ ಹಾಗೂ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳ ವಸತಿ ನಿಲಯದ ಪರಿಸ್ಥಿತಿಯನ್ನು ಕಂಡು ಬೇಸರ ವ್ಯಕ್ತ ಪಡಿಸಿ ಅವರು ಈ ಪರಿಸ್ಥಿತಿಯಲ್ಲಿ ಮಕ್ಕಳು ಹೇಗೆ ಮಲಗಬೇಕು. ಕೂಡಲೆ ಬೇರೆ ಕಡೆಗಳಲ್ಲಿ ಕಟ್ಟಡವನ್ನು ಹುಡುಕಿ ವಸತಿ ಶಾಲೆಯನ್ನು ಸ್ಥಳಾಂತರಿಸುವಂತೆ ಸೂಚಿಸಿದರು.


    ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಧ್ಯಾಪಕಿ ನಮೃತಾ ನಾಯ್ಕ ಮಾತನಾಡಿ, ಮುಂಡಗೋಡ ಹಾಗೂ ಶಿರಸಿ ತಾಲೂಕುಗಳಲ್ಲಿ ಹಲವಾರು ದಿನಗಳ ಕಾಲ ಭಾಡಿಗೆ ಕಟ್ಟಡ ಹುಡುಕಾಡಿದರು ವಸತಿ ಶಾಲೆಗೆ ಸೂಕ್ತವಾದ ಕಟ್ಟಡ ಸಿಗಲಿಲ್ಲ ಎಂದು ತಿಳಿಸಿದರು. ಮುಂಡಗೋಡ ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕಿಯರ ವಸತಿ ನಿಲಯ ನೂತನ ಕಟ್ಟಡವನ್ನು ಹಸ್ತಾಂತರಿಸಿಕೊಂಡು ಅಲ್ಲಿ ವಸತಿ ಶಾಲೆಯನ್ನು ಸ್ಥಳಾಂತರಿಸುವ ಕುರಿತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಲಕ್ಷ್ಮಣ ಬಬಲಿ ಅವರೊಂದಿಗೆ ಚರ್ಚಿಸಿದರು.

    300x250 AD


    ನಂತರ ಮಳಗಿ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಟ್ರಿಕ್ ನಂತರ ಹಾಗೂ ಮಟ್ರೀಕ್ ಪೂರ್ವ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೂ ಕರ್ನಾಟಕ ಪಬ್ಲಿಕ ಸ್ಕೂಲ್‍ಗೆ ಭೇಟಿ ನೀಡಿ ಪುಟಾಣಿ ಮಕ್ಕಳೊಂದಿಗೆ ಕೆಲ ಸಮಯ ಮಾತನಾಡಿ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನಯಡಿ ಕೈಗೊಂಡ ಬಾಸ್ಕೇಟ್‍ಬಾಲ್ ಕ್ರೀಡಾಂಗಣವನ್ನು ಪರಿಶೀಲಿಸಿದರು.

    ಇಂದಿರಾಗಾಂಧಿ ವಸತಿ ನಿಲಯದ ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಈ ಬಗ್ಗೆ ಶಿರಸಿ ಸಹಾಯಕ ಕಮಿಷನರ ಹಾಗೂ ತಹಸೀಲ್ದಾರ್ ಅವರೊಂದಿಗೆ ಚರ್ಚಿಸಿ ಒಂದು ತಿಂಗಳೋಳಗಾಗಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಗುವುದು ಎಂದುಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಗ್ ಎಂ ಹೇಳಿದರು.


    ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಲಕ್ಷ್ಮಣ ಬಬಲಿ, ತಾಪಂ.ಅಧಿಕಾರಿ ಪ್ರವೀಣ ಕಟ್ಟಿ, ಹಾಗೂ ಟಿ.ವೈ.ದಾಸನಕೋಪ್ಪ, ಸಮಾಜ ಕಲ್ಯಾಣ ಅಧಿಕಾರಿ ಗೋಪಾಲಕೃಷ್ಣ ಡಿ, ಹಿಂದುಳಿದ ವರ್ಗದ ಅಧಿಕಾರಿ ಸುಜಾತಾ ಹಂಜಿ, ಪಿಡಿಒ ಅಣ್ಣಪ್ಪ ಭೋವಿ ಮುಂತಾದರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top