• Slide
    Slide
    Slide
    previous arrow
    next arrow
  • ಹಿಂದು ರುದ್ರಭೂಮಿಗೆ ಪರ್ಯಾಯ ಜಾಗದ ವ್ಯವಸ್ಥೆ ಕಲ್ಪಿಸುವಂತೆ ಸಚಿವ ಹೆಬ್ಬಾರ’ಗೆ ಮನವಿ

    300x250 AD

    ಯಲ್ಲಾಪುರ: ಪಟ್ಟಣದ ಬಿಸಗೋಡ ಕ್ರಾಸ್ ಬಳಿ ಟ್ರಕ್ ಟರ್ಮಿನಲ್ ಹೆಸರಿನಲ್ಲಿ ನೆಲಸಮ ಮಾಡಲಾದ ಹಿಂದು ರುದ್ರಭೂಮಿಗೆ ಪರ್ಯಾಯ ಜಾಗದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ಹಿಂದು ಸಂಘಟನೆಗಳ ವತಿಯಿಂದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಮನವಿ ಸಲ್ಲಿಸಲಾಯಿತು.

    ಪಟ್ಟಣದಲ್ಲಿ 100 ವರ್ಷಕ್ಕಿಂತಲೂ ಹಿಂದಿನಿಂದ ಹಿಂದು ರುದ್ರಭೂಮಿ ಇರುವ ಜಾಗವನ್ನು ಕಳೆದ 15 ದಿನಗಳಿಂದ ವಾಹನ ನಿಲುಗಡೆ ಪ್ರದೇಶ ಎಂದು ಜೆಸಿಬಿ ಯಂತ್ರ ಬಳಸಿ ಹಿಂದೂ ರುದ್ರ ಭೂಮಿಯಲ್ಲಿರುವ ಬಹಳಷ್ಟು ಸಮಾಧಿ ಕಟ್ಟೆಗಳನ್ನು ಏಕಾಏಕಿ ಒಡೆಯಲಾಗಿದೆ. ಇದರಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಘಾಸಿ ಉಂಟಾಗಿದೆ. ಸಚಿವರು ಗಮನಹರಿಸಿ ಪ್ರತ್ಯೇಕ ರುದ್ರಭೂಮಿ ಜಾಗ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು. ಸಚಿವರು ಮನವಿ ಸ್ವೀಕರಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.

    300x250 AD

    ಈ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ ನಾಯ್ಕ, ಮಾರುತಿ ಬೋವಿವಡ್ಡರ್, ನಾಗೇಶ ಬೋವಿವಡ್ಡರ್, ಜಗನ್ನಾಥ ರೇವಣಕರ್, ರವಿ ಪಾಟಣಕರ್, ಮಹಾದೇವ ಬೋವಿವಡ್ಡರ್, ಬುಚ್ಚಣ್ಣ ಯಾಮಕೆ ಇತರರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top