ಶಿರಸಿ: ಲಯನ್ಸ್ ಶಾಲೆಯ ಪ್ರಾಂಗಣದಲ್ಲಿ 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಾತನಾಡುತ್ತಾ ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಲಯನ್ ಎನ್. ವಿ . ಜಿ.ಭಟ್ ರವರು ಸ್ವಚ್ಛ ಆಡಳಿತ ತಮ್ಮ ಉಸಿರಾಗಿರಬೇಕು ಎಂದರು.
ಇಂದು ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ, ಲಯನ್ಸ್ ಎಜುಕೇಶನ್ ಸೊಸೈಟಿಯ ಪದಾಧಿಕಾರಿಗಳು ಮತ್ತು ಸದಸ್ಯರು ,ಲಯನ್ಸ್ ಕ್ಲಬ್ ಸದಸ್ಯರು, ಲಯನ್ಸ್ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರೆಲ್ಲಾ ಸೇರಿ ದೇಶದ 73 ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ, ಶಿಸ್ತುಬದ್ಧವಾಗಿ ಆಚರಿಸಿದರು.
ಲಯನ್ ಪ್ರೊಫೆಸರ್ ರವಿ ನಾಯಕ್ (ಗೌರವ ಕಾರ್ಯದರ್ಶಿಗಳು ಲಯನ್ಸ್ ಎಜುಕೇಶನ್ ಸೊಸೈಟಿ) ಇವರು ಸರ್ವರನ್ನು ಸ್ವಾಗತಿಸಿದರು. ಗೈಡ್ ಕ್ಯಾಪ್ಟನ್, ಲಯನ್ಸ್ ಶಾಲೆ ಸಹಶಿಕ್ಷಕಿ ಶ್ರೀಮತಿ ಚೇತನಾ ಪಾವಸ್ಕರ್ ಮತ್ತು ಸ್ಕೌಟ್ ಮಾಸ್ಟರ್ ರಾಘವೇಂದ್ರ ಹೊಸೂರು ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಪಥಸಂಚಲನ ನಡೆಯಿತು.
ಲಯನ್ಸ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಲ.ಪ್ರೋ. ಎನ್. ವಿ . ಜಿ.ಭಟ್ ರವರು ಧ್ವಜಾರೋಹಣ ನಡೆಸಿಕೊಟ್ಟರು. ಅಲ್ಲದೇ ವಿದ್ಯಾರ್ಥಿಗಳ ಯೋಗ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು . ಧ್ವಜ ಗೀತೆ ,ರಾಷ್ಟ್ರಗೀತೆ ,ರೈತ ಗೀತೆಯನ್ನು ವಿದ್ಯಾರ್ಥಿನಿಯರು ಸುಶ್ರಾವ್ಯವಾಗಿ ಹಾಡಿದರು. ಶ್ರೀ ಶಶಾಂಕ್ ಹೆಗಡೆ ಇವರು (ಮುಖ್ಯಾಧ್ಯಾಪಕರು ಲಯನ್ಸ್ ಶಾಲೆ) ವಂದಿಸಿದರು. ಶ್ರೀಮತಿ ಮುಕ್ತಾ ನಾಯ್ಕ ಇವರು ಕಾರ್ಯಕ್ರಮ ನಿರೂಪಿಸಿದರು.