ಮುಂಡಗೋಡ: ಬೇಡಸಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ಶ್ಯಾನವಳ್ಳಿ ಗ್ರಾಮದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಬೇಡಸಗಾಂವ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಶ್ಯಾನವಳ್ಳಿ ಗ್ರಾಮದಲ್ಲಿರುವ ತಮ್ಮ ಸಹಾಯಕನ ಮನೆಯ ಗೃಹ ಪ್ರವೇಶ ಸಮಾರಂಭಕ್ಕೆ ಆಗಮಿಸಿದ್ದ ಅವರು ನಂತರ ಬೇಡಸಗಾಂವ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಗ್ರಾಮಸ್ಥರು ತಮ್ಮ ಭಾಗದಲ್ಲಿನ ಅತಿಕ್ರಮಣ ಭೂಮಿ ಮಂಜೂರಿಗೆ ಕ್ರಮ ವಹಿಸುವಂತೆ ವಿನಂತಿಸಿದರು. ಈ ಬಗ್ಗೆ ಸಂಭಂದಿಸಿದ ಸಚಿವರುಗಳೊಂದಿಗೆ ಚರ್ಚಿಸುತ್ತೆನೆಂದರು. ನಂತರ ದೇವಸ್ಥಾನ ಪಕ್ಕದಲ್ಲಿದ್ದ ಮಂಗಗಳ ಹಿಂಡನ್ನು ಕಂಡ ಅರವಿಂದ ಲಿಂಬಾವಳಿ ಒಂದು ಕಿಮಿ ದೂರದಲ್ಲಿರುವ ಅಂಗಡಿಯಿಂದ ಸಿಹಿ ತಿನಿಸು ತರಸಿ ಮಂಗಗಳಿಗೆ ತಿನಿಸಿದರು.