ಮುಂಡಗೋಡ : ತಾಲೂಕಿನ ಬಸಾಪುರ ಗ್ರಾಮದಲ್ಲಿ ಬಸ್ ತಡೆದರು ನಿಲ್ಲದೆ ಹೋಗಿದ್ದಾರೆ ಎಂದು ಬಸ್ ಚಾಲಕ ಹಾಗೂ ನಿರ್ವಾಹಕನ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿರುವ ಘಟನೆ ಸೋಮವಾರ ಜರುಗಿದೆ.
ಸೋಮವಾರ ಬೆಳಿಗ್ಗೆ ಬಸಾಪುರದಿಂದ ಮುಂಡಗೋಡಿಗೆ ಹೊರಟಿದ್ದ, “ಮುಂಡಗೋಡ ಹುಲಿಹೊಂಡ ಮುಂಡಗೋಡ” ಬಸ್ ನಲ್ಲಿ ಓರ್ವ ಯುವಕ ಬಸ್ ಹತ್ತಲು ಬಂದಿದ್ದ ಎನ್ನಾಲಾಗಿದೆ. ಅಷ್ಟೊತ್ತಿಗಾಗಲೇ ಹೊರಟಿದ್ದ ಬಸ್‍ಗೆ ಕೂಗಿ ನಿಲ್ಲಿಸಿದ್ದಾರೆ. ಆದರೆ ಬಸ್ ನಿಲ್ಲಿಸಿದರು ಮತ್ತೊರ್ವ ಯುವಕ ಏಕಾಏಕಿ ಬಂದು ಬಸ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ ಬಸ್ ನಿಂದ ಚಾಲಕನನ್ನು ಎಳೆದು ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಇದರ ಪರಿಣಾಮ ಚಾಲಕನ ಕೈಗೆ ಗಾಯವಾಗಿದ್ದ ಸದ್ಯ ಈ ಪ್ರಕರಣ ಪೆÇಲೀಸ್ ಠಾಣೆಯ ಮೆಟ್ಟಿಲೇರಿದೆ.