ಮುಂಡಗೋಡ: ತಾಲೂಕಿನ ಅಜ್ಜಳ್ಳಿಯಲ್ಲಿ ಜಮೀನಿಗೆ ಬಂದು ಅವಾಚ್ಯವಾಗಿ ಬೈದು ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಹರೀಶ್ ಪಾಟೀಲ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿತರಾದ ಹನುಮಂತ ಪಾಟೀಲ, ಪ್ರವೀಣ ಪಾಟೀಲ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ. ಅಜ್ಜಳ್ಳಿ ಗ್ರಾಮದ ಸರ್ವೆ ನಂಬರ 33 ರಲ್ಲಿ ಗದ್ದೆಯ ಜಾಗದ ಹಕ್ಕಿನ ವಿಷಯದಲ್ಲಿ 2016 ರಿಂದಲೂ ತಂಟೆ ತಕರಾರು ಮಾಡುತ್ತಾ ಬಂದಿರುವ ಆರೋಪಿತರಿಬ್ಬರೂ ಅಕ್ರಮವಾಗಿ ತೋಟಕ್ಕೆ ನುಗ್ಗಿ ಅವಾಚ್ಯವಾಗಿ ಬೈದು ಕುಡುಗೊಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಹರೀಶ್ ಪಾಟೀಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ವಹಿಸಿದ್ದಾರೆ.