ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 73 ನೇ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ನೆರವೇರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ||ದಾಕ್ಷಾಯಣಿ ಜಿ. ಹೆಗಡೆ ಇವರು ಮಾತನಾಡಿ ಇಂದಿನ ಯುವಜನಾಂಗ ರಾಷ್ಟ್ರ ನಿರ್ಮಾಣದ ಶಿಲ್ಪಿಗಳು ಪ್ರತಿಯೊಬ್ಬ ವಿದ್ಯಾರ್ಥಿಯು ಒಳ್ಳೆಯ ಧ್ಯೇಯವನ್ನು ಇಟ್ಟುಕೊಂಡು ವ್ಯಕ್ತಿಗತವಾಗಿ ವಿಕಾಸಗೊಂಡರೆ ಆಗ ರಾಷ್ಟ್ರವು ತಾನೇ ಅಬಿವೃದ್ಧಿಯಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಎಸ್ ವ್ಹಿ ಕಟ್ಟಿ ವಿಶ್ರಾಂತ ಪ್ರಾಂಶುಪಾಲರು YTSS ಮಾತನಾಡುತ್ತಾ ಡಾ|| ಬಿ ಆರ್. ಅಂಬೇಡ್ಕರರ ಸಂವಿಧಾನವೇ ಭಾರತೀಯರಿಗೆ ಮೂಲಮಂತ್ರ. ರಾಷ್ಟ್ರ ಕಟ್ಟುವಲ್ಲಿ ಯುವಕರು ಮುಂದೆ ಬರಬೇಕು. ನಮ್ಮ ದೇಶದ ಸಲುವಾಗಿ ನಮ್ಮ ಪ್ರಾಣವನ್ನು ಮುಡಿಪಾಗಿಡಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಊರಿನ ಗಣ್ಯರಾದ ಶ್ರೀ ರಾಜೇಂದ್ರ ಬದ್ದಿ, ಶ್ರೀ ಎಂ ಎಂ ಶೇಖ್, ಶ್ರೀ ಭಾಸ್ಕರ್ ಭಟ್, ಶ್ರೀ ಗೋಪಾಲಕೃಷ್ಣ ನೇತ್ರೇಕರ್, ಐ.ಟಿ.ಐ ಕಾಲೇಜಿನ ಉಪನ್ಯಾಸಕರಾದ ಶ್ರೀ ಶದಾಬ್ ಹಾಗೂ ಶ್ರೀ ಸಚಿನ್, ನಿವೃತ್ತ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಶ್ರೀ ಎಂ ಎಂ ಹೆಬ್ಬಳ್ಳಿ, ಪತ್ರಾಂಕಿತ ವ್ಯವಸ್ಥಾಪಕರಾದ ಶ್ರೀ ಎನ್ ಬಿ ಮೆಣಸುಮನೆ, ಇತಿಹಾಸ ಸಹ ಪ್ರಾಧ್ಯಾಪಕರಾದ ಶ್ರೀ ಡಿ ಎಸ್ ಭಟ್, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಸುರೇಖಾ ತಡವಲ, ಕನ್ನಡ ಸಹಾಯಕ ಪ್ರಾಧ್ಯಾಪಕಿಯರಾದ ಶ್ರೀಮತಿ ಸವಿತಾ ನಾಯ್ಕ, ಕಾಲೇಜಿನ ಎಲ್ಲ ಬೋಧಕ, ಬೋಧಕೇತರರು, ಐಟಿಐ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಆಶಾ ಬೆಳ್ಳೆನವರ ಬಿ.ಎ ದ್ವಿತೀಯ ವರ್ಷ ದೇಶಭಕ್ತಿಗೀತೆ ಹಾಡಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶ್ರೀ ರಾಮಕೃಷ್ಣಗೌಡ ಸ್ವಾಗತಿಸಿದರು. ರೋವರ್ ಸ್ಕೌಟ್ಸ್ ಲೀಡರ್ ಹಾಗೂ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಡಿ ಜಿ ತಾಪಸ್ ವಂದಿಸಿದರು. ದಿವ್ಯಾ ನಾಯ್ಕ ಬಿ.ಕಾಂ ದ್ವಿತೀಯ ವರ್ಷ ಕಾರ್ಯಕ್ರಮ ನಿರೂಪಿಸಿದರು.