ಶಿರಸಿ: ಅಪ್ರಾಪ್ತ ಸಾಕು ಮಗಳ ಮೇಲೆ ಅತ್ಯಾಚಾರ ಮಾಡಿದ ಆಪಾದನೆ ಮೇಲೆ ಗುಲಾಬಚಂದ ಚೀಮಾಲಾಲ್ ಶಾಹ ಎಂಬಾತನನ್ನು ಶಿರಸಿ ಪೋಲೀಸರು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.
ಮೂಲತಃ ಯಾದಗಿರಿಯವನಾಗಿದ್ದು, ಶಿರಸಿಯಲ್ಲಿ ವಾಸವಾಗಿರುವ ಆರೋಪಿ, ತನ್ನ ಸಾಕು ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ನೊಂದ ಬಾಲಕಿ ದೂರಿನಲ್ಲಿ ತಿಳಿಸಿದ್ದಾಳೆ.
ಈ ಪ್ರಕರಣದಲ್ಲಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಕೃತ್ಯ ಎಸಗಿದ ಬಗ್ಗೆ ತನಿಖೆಯಲ್ಲಿ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ತನಿಖಾಧಿಕಾರಿ ಶಿರಸಿ ಸಿಪಿಐ ರಾಮಚಂದ್ರ ನಾಯಕ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಕೈಗೆತ್ತಿಕೊಂಡ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ಎಫ್.ಟಿ.ಎಸ್.ಸಿ-1 ಮಕ್ಕಳ ನ್ಯಾಯಾಲಯ ಕಾರವಾರ, ಸುಧೀರ್ಘ ವಿಚಾರಣೆ ನಡೆಸಿ ತೀರ್ಪು ನೀಡಿ ಆರೋಪಿತನಿಗೆ ಒಟ್ಟು 77,500/- ರೂ ದಂಡ ಹಾಗೂ 20 ವರ್ಷ ಕಠಿಣ ಶಿಕ್ಷೆ ನೀಡಿ ತೀರ್ಪು ನೀಡಿದೆ. ಈ ಪ್ರಕರಣ ದಾಖಲಾಗಿ 9 ತಿಂಗಳೊಳಗೆ ಶಿಕ್ಷೆ ಪ್ರಕಟವಾಗಿದ್ದು, ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿ ಶಿಕ್ಷೆ ವಿಧಿಸುವಲ್ಲಿ ಶ್ರಮಿಸಿದ ಸಿಪಿಐ ರಾಮಚಂದ್ರ ನಾಯಕ ಮತ್ತು ವಿಶೇಷ ಸರ್ಕಾರಿ ಅಭಿಯೋಜಕ ಸುಭಾಷ ಪಿ ಕೈರನ್ ಗೆ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ ಪನ್ನೇಕರ್ ಪ್ರಶಂಸಿಸಿದ್ದಾರೆ.
ಸಾಕು ಮಗಳ ಮೇಲೆ ಅತ್ಯಾಚಾರಗೈದವಗೆ 20 ವರ್ಷ ಜೈಲು
