ಕಾರವಾರ: ಒಂದು ರಾಜ್ಯ ಹಲವು ಜಗತ್ತು ಎನ್ನುವ ಪ್ರವಾಸೋದ್ಯಮದ ಶೀರ್ಷಿಕೆಯು ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಅನ್ವಯಿಸುವಂತಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಹಾಗೂ ಪ್ರವಾಸೋದ್ಯಮದ ಉದ್ದಿಮೆದಾರರಿಗಾಗಿ ಹಮ್ಮಿಕೊಳ್ಳಲಾದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಲೆನಾಡು, ಬಯಲುಸೀಮೆ, ನೈಸರ್ಗಿಕ ಅರಣ್ಯ, ಸಮುದ್ರತೀರಗಳು, ಜಲಪಾತ ಹಾಗೂ ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ವೈವಿದ್ಯಮಯದ ರಾಜ್ಯದ ಏಕೈಕ ಜಿಲ್ಲೆ ನಮ್ಮದಾಗಿದೆ. ಪ್ರಚಾರದ ಕೊರತೆಯಿಂದ ಪ್ರವಾಸಿಗರು ಕೆಲವೇ ಸೀಮಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.
ಕೋವಿಡ್ ಕಾರಣದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಇನ್ನೂ ಕುಂಟಿತವಾಗಿತ್ತು, ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಉದ್ದೇಮೆದಾರರ ಜೊತೆ ಸಂವಾದ ನಡೆಸಿ, ಪ್ರಚಾರಕ್ಕೆ ಪ್ರವಾಸೋದ್ಯಮ ಉದ್ದೇಮೆದಾರರು ತೊಡಗಿಕೊಳ್ಳುವಂತೆ ಮಾಡಿ ಜಿಲ್ಲೆಯ ಪ್ರವಾಸೋದ್ಯಮವನ್ನ ಅಭಿವೃದ್ಧಿ ಗೊಳಿಸುವುದು ಇಂದಿನ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.
ಕೋವಿಡ್‍ದಿಂದ ಪ್ರವಾಸೋದ್ಯಮದ ಕುಂಟಿತವಾಗಿತ್ತು ಎನ್ನುವುದು ಒಂದಡೆಯಾದರೆ ಅದು ಅವಕಾಶಗಳನ್ನು ತೆರೆದುಕೊಟ್ಟಿದೆ ಎಂದು ಹೇಳಬೇಕು. ಹಣವಂತರು ವಿದೇಶಿ ಸ್ಥಳಗಳ ಪ್ರವಾಸಕ್ಕೆ ಹೊಗುತ್ತಿದ್ದವರು ಇಂದು ಸ್ಥಳಿಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದರ ಅವಕಾಶವನ್ನು ತಾವು ಸದುಪಯೋಗಡಿಸಿಕೊಳ್ಳಬೇಕು. ಬೆರಳೆಣೀಕೆಯಷ್ಟು ಸ್ಥಳಗಳ ಬಗ್ಗೆ ಮಾಹಿತಿ ಪಡೆದು ಬರುವ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸೋದ್ಯಮ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವಂತೆ ಜಿಲ್ಲಾ ಪ್ರವಾಶೋದ್ಯಮ ಇಲಾಖೆಯಿಂದ ವೆಬ್ ಸೈಟ್ ಒಂದನ್ನ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಇಲಾಖೆ ಜೊತೆಗೆ ಉದ್ಯಮಿಗಳು ಸಣ್ಣ ಸಣ್ಣ ಮಾಹಿತಿ ಸಂಗ್ರಹಿಸಿ ನೀಡಿದ್ದಲ್ಲಿ ಹಾಗೂ ಪ್ರವಾಸಿಗರು ಒಂದೇ ಪ್ರವಾಸದಲ್ಲಿ ಅನೇಕ ಅನುಭವಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಅನೇಕ ಉದ್ಯಮಿಗಳಿಗೆ ನುರಿತ ಕೆಲಸಗಾರರ ಕೊರತೆ ಇದೆ. ಈಗಾಗಲೇ ಜಿಲ್ಲೆಯ ಯುವಕ ಯುವತಿಯರು ಉದ್ಯೋಗ ಅರೆಸಿ ಪಕ್ಕದ ರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂತವರಿಗೆ ಪ್ರವಾಸೋದ್ಯಮ ಇಲಾಖೆಯಿಂದ ತರಬೇತಿ ನೀಡಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸೋದ್ಯಮದ ವೆಬ್ ಸೈಟ್, ಲೋಗೋ ಹಾಗೂ ಜಿಲ್ಲೆಯಲ್ಲಿನ ಉರಗಗಳ ಕುರಿತು ಲೇಖಕ ಓಂಕಾರ್ ಪೈ ಬರೆದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪಂಚಾಂಯತ್ ಸಿ ಇ ಓ ಪ್ರಿಯಾಂಗಾ ಎಂ, ಅವರು ಮಾತನಾಡಿ ಇಂದಿನ ದಿನಮಾನಗಳಲ್ಲಿ ಕೇವಲ ಧಾರ್ಮಿಕ ಅಥವಾ ಐತಿಹಾಸಿಕ ಸ್ಥಳ ವಿಕ್ಷಣೆಗೆ ಮಾತ್ರ ಪ್ರವಾಸ ಸಿಮೀತವಾಗಿಲ್ಲ, ಆಹಾರ, ಆಯಾ ಸ್ಥಳದ ಸಾಂಸ್ಕøತಿಕ ಸೊಬಗನ್ನು ಸವಿಯಲು ಪ್ರವಾಸಿಗರು ಬರುವುದುಂಟು. ಈ ನಿಟ್ಟಿನಲ್ಲಿ ಪ್ರವಾಸೋದ್ಯಮಿಗಳು ಇಲಾಖೆ ಜೊತೆಗೆ ಕೈ ಜೋಡಿಸಿದ್ದಲ್ಲಿ ಜಿಲ್ಲೆಯ ಪ್ರವಾಸೋದ್ಯಮವು ವಿಸ್ತಾರವಾಗಿ ಬೆಳೆಯಲು ಸಾದ್ಯವಾಗುವುದು ಎಂದರು.
ಪ್ರಸೋದ್ಯಮ ಇಲಾಖೆಯ ಉಪ ನಿರ್ದೇಶಕ ಜಯಂತ್ ಸೇರಿದಂತೆ ಇತರರು ಇದ್ದರು.