ಯಲ್ಲಾಪುರ: ತಾಲ್ಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.
ಸಮಾಜ ವಿಜ್ಞಾನ ಶಿಕ್ಷಕ ಚಿದಾನಂದ ಹಳ್ಳಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿ , ಚುನಾವಣೆಯಲ್ಲಿ ಮತದಾರನು ಯಾವುದೇ ಆಸೆ ಅಮಿಷಗಳಿಗೆ ಬಲಿಯಾಗದೇ ಮತದಾನ ಮಾಡಬೇಕು. ಮತದಾನ ನಾಗರಿಕರ ಹಕ್ಕು. ನಾವು ಮತಗಳಿಂದ ಆಯ್ಕೆ ಮಾಡಿದ ಜನಪ್ರತಿನಿಧಿಗಳ ಸೇವೆ ಜವಾಬ್ದಾರಿಯ ಸ್ಥಾನವಾಗಿದ್ದು ನಮ್ಮ ಆಯ್ಕೆಗೆ ಮಹತ್ವವಿದೆ. ಯಾರೂ ನಿರ್ಲಕ್ಷ ಮಾಡದೇ ಮತದಾನದ ಜವಾಬ್ದಾರಿ ನಿಭಾಯಿಸಬೇಕಿದೆ ಎಂದರು.
ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ,ಶಿಕ್ಷಕರಾದ ಎಸ್ ಟಿ ಬೇವಿನಕಟ್ಟಿ, ಸರೋಜಾ ಭಟ್ಟ, ರವೀಂದ್ರ ಗಾಂವ್ಕಾರ, ಗಿರೀಶ ಹೆಬ್ಬಾರ, ಸೂರ್ಯನಾರಾಯಣ ಹೆಗಡೆ ಉಪಸ್ಥಿತರಿದ್ದರು.