• Slide
  Slide
  Slide
  previous arrow
  next arrow
 • ಆಟೋ ಚಾಲಕರಿಗೆ ಫುಡ್ ಕಿಟ್ ವಿತರಿಸಿದ ಸುಷ್ಮಾ ರಾಜಗೋಪಾಲ್

  300x250 AD

  ಶಿರಸಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಕೆಪಿಸಿಸಿ ಯಿಂದ ನಿಯೋಜಿತರಾದ ಶಿರಸಿ ಮತ್ತು ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ, ರಾಜ್ಯ ಮಹಿಳಾ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷೆ ಸುಷ್ಮಾ ರಾಜಗೋಪಾಲ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಾಲನೆ ನೀಡಿದ ಫುಡ್ ಕಿಟ್ ವಿತರಣಾ ಕಾರ್ಯಕ್ರಮದ ಮುಂದುವರಿಕೆಯಾಗಿ ಸೋಮವಾರ ಶಿರಸಿಯ ಬಸ್ ಸ್ಟ್ಯಾಂಡ್ ಸಮೀಪವಿರುವ ಆಟೋ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಒಳಗಾದ ಆಟೋ ಚಾಲಕರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು.
  ಕಿಟ್ ವಿತರಣೆ ಮಾಡಿ ಮಾತನಾಡಿದ ಸುಷ್ಮಾ ರಾಜಗೋಪಾಲ್ ರಾಜ್ಯಾಧ್ಯಕ್ಷರು ಚಾಲನೆ ನೀಡಿದ ಕಾರ್ಯಕ್ರಮವನ್ನು ಮುಂದುವರೆಸುತ್ತ ಶಿರಸಿ ನಗರದಲ್ಲಿರುವ ಆಟೋ ಚಾಲಕರಿಗೆ ಆಹಾರ ವಸ್ತುಗಳನ್ನು ವಿತರಿಸುತ್ತದ್ದೇವೆ. ಕೋವಿಡ್ ಲಾಕ್ ಡೌನ್ ಸಂಕಷ್ಟದಲ್ಲಿ ತೊಂದರೆಗೊಳಗಾದ ಆಟೋ ಮಾಲಕರು, ಚಾಲಕರು ಜೀವನ ನಡೆಸಲು ಕಷ್ಟ ಪಟ್ಟಿದ್ದಾರೆ. ಟ್ಯಾಕ್ಸ್ ತುಂಬಲು, ಆಟೋ ಸುಸ್ಥಿತಿಯಲ್ಲಿ ಇಡಲು ತೊಂದರೆ ಅನುಭವಿಸಿದ್ದಾರೆ. ಅವರಿಗೆ ನಮ್ಮ ಕಡೆಯಿಂದ ಸಣ್ಣ ಸಹಾಯವನ್ನು ಮಾಡುತ್ತಿದ್ದೇವೆ. ಸಂಕಷ್ಟಕ್ಕೆ ಒಳಗಾದವರ ಕಣ್ಣೀರು ಒರೆಸಲು ಒಂದು ಸಣ್ಣ ಅವಕಾಶವನ್ನು ದೇವರು ನಮಗೆ ನೀಡಿದ್ದಾನೆ. ನಮ್ಮ ಅಣ್ಣ ದಿ. ದೀಪಕ ಹೊನ್ನಾವರ ಅವರ ನೆನಪು ಮತ್ತು ಮಾರ್ಗದರ್ಶನ ಈ ಕಾರ್ಯವನ್ನು ಮಾಡಲು ಪ್ರೇರೇಪಿಸಿದೆ. ಇದನ್ನು ಮುಂದುವರೆಸಿಕೊಂಡು ಹೋಗುತ್ತೇವೆ.
  ಸಿದ್ದಾಪುರ ನಗರದ ಟೆಂಪೆÇೀ, ಆಟೋ ಚಾಲಕರು, ಸಹಾಯಕರಿಗೆ ಆಹಾರ ಕಿಟ್ ವಿತರಣೆಯನ್ನು ಮಾಡುತ್ತೇವೆ. ನಂತರ ಶಿರಸಿ ಮತ್ತು ಸಿದ್ದಾಪುರದ ಗ್ರಾಮೀಣ ಪ್ರದೇಶಗಳ ಪಂಚಾಯತ ಮಟ್ಟದಲ್ಲಿ ತೊಂದರೆಗೊಳಗಾದ ಆಯ್ದ ಬಡವರಿಗೆ ಆಹಾರ ಕಿಟ್ ವಿತರಿಸುತ್ತೇವೆ. ಎಲ್ಲರ ಸಹಕಾರದೊಂದಿಗೆ ಈ ಕಾರ್ಯವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿ ಸಹಕಾರ ಕೋರಿದರು.
  ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸತೀಶ್ ನಾಯ್ಕ್ ಮಧುರವಳ್ಳಿ ಸ್ವಾಗತಿಸಿ ದಿ. ದೀಪಕ ಹೊನ್ನಾವರ ಅಭಿಮಾನಿ ಬಳಗದ ಸಾಮಾಜಿಕ ಕಾರ್ಯಗಳನ್ನು ವಿವರಿಸಿ, ಸಂಕಷ್ಟದ ಸಂದರ್ಭದಲ್ಲಿ ಆಹಾರ ಕಿಟ್ ವಿತರಣೆ ಕಾರ್ಯವನ್ನು ಮಾಡುವ ಕುರಿತು ತಿಳಿಸಿದರು.
  ನಂತರ ನೀಲೆಕಣಿ, ಅಗಸೇಬಾಗಿಲು, ಕರ್ಜಗಿ ಕಲ್ಯಾಣ ಮಂಟಪ, ಸರಕಾರಿ ಆಸ್ಪತ್ರೆ, ಹೊಸ ಬಸ್ ಸ್ಟ್ಯಾಂಡ್, ಸಾಮ್ರಾಟ್ ಆಟೋ ನಿಲ್ದಾಣಗಳಿಗೆ ಭೇಟಿ ನೀಡಿ ಚಾಲಕರಿಗೆ ಆಹಾರ ಕಿಟ್ ವಿತರಿಸಲಾಯಿತು.
  ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೂರ್ಯಪ್ರಕಾಶ ಹೊನ್ನಾವರ, ಸುಮಾ ಉಗ್ರಾಣಕರ್, ಆಟೋ ಚಾಲಕರ ಮಾಲಕರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಗೌಡ, ರಾಜ್ಯ ಮೀನುಗಾರ ಕಾಂಗ್ರೆಸ್ ಕಾರ್ಯದರ್ಶಿ ರಾಜು ಉಗ್ರಾಣಕರ್, ಮಹೇಶ ಶೆಟ್ಟಿ ಚಿಪಗಿ, ಕಿಸಾನ್ ಕಾಂಗ್ರೆಸ್ ನ ಮಾಲತಿ ಮರಾಠೆ, ಹಿರಿಯ ಕಾಂಗ್ರೆಸ್ಸಿಗರಾದ ಪಠಾಣ್ ಸಾಹೇಬ್ರು, ಶಂಕರ ಗುಡ್ಡದಮನೆ, ನಾಗಪ್ಪ ಪಟಗಾರ, ಸಲೀಂ, ಈಶ್ವರ ಆಚಾರಿ, ಸುರೇಶ ಮುಂತಾದವರು ಪಾಲ್ಗೊಂಡು ಕಿಟ್ ವಿತರಿಸುವಲ್ಲಿ ಸಹಕರಿಸಿದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top