ಕುಮಟಾ: ಡಾ.ಎ.ವಿ ಬಾಳಿಗಾ ಕಾಲೇಜಿಗೆ ಭೇಟಿ ನೀಡಿದ 8 ಕರ್ನಾಟಕ ನೆವೆಲ್ ಯುನಿಟ್ ಎನ್‍ಸಿಸಿ ಕಮಾಂಡರ್ ಸತ್ಯನಾಥ ಎಂ. ಬೋಸ್ಲೆ ಎನ್‍ಸಿಸಿ ಕೆಡೆಟ್‍ಗಳ ಶಿಸ್ತು ಪರಿಶೀಲಿಸಿದರು.
ಪಟ್ಟಣದ ಡಾ. ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಎನ್‍ಸಿಸಿ ನೆವೆಲ್ ವಿಭಾಗದ ವಾರ್ಷಿಕ ತರಬೇತಿ ಶಿಬಿರ ಇತ್ತೀಚೆಗೆ ಮುಕ್ತಾಯಗೊಂಡಿತು.
ಶಿಬಿರದಲ್ಲಿ ಸುಮಾರು 35 ಕ್ಕೂ ಹೆಚ್ಚು ಕೆಡೆಟ್‍ಗಳು ಭಾಗವಹಿಸಿದ್ದರು. ಏಳು ದಿನಗಳ ಕಾಲ ನಡೆದ ವಾರ್ಷಿಕ ತರಬೇತಿ ಶಿಬಿರದ ಕೊನೆಯ ದಿನ 8 ಕರ್ನಾಟಕ ನೆವೆಲ್ ಯುನಿಟ್ ಎನ್‍ಸಿಸಿ ಕಮಾಂಡರ್ ಸತ್ಯನಾಥ ಎಂ. ಬೋಸ್ಲೆ ಭೇಟಿ ನೀಡಿ ಪರಿಶೀಲಿಸಿದರು. ಶಿಬಿರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ವೇಳೆ ಮಹಾವಿದ್ಯಾಲಯದ ಎನ್‍ಸಿಸಿ ಅಧಿಕಾರಿ ಲೆ. ವಿ.ಆರ್. ಶಾನಭಾಗ್ ಉಪಸ್ಥಿತರಿದ್ದರು