• Slide
    Slide
    Slide
    previous arrow
    next arrow
  • ಬಿ.ಇಡಿ ನಲ್ಲಿ 100% ಫಲಿತಾಂಶ ದಾಖಲಿಸಿದ ಕೆ.ಎಲ್.ಇ. ಸಂಸ್ಥೆ

    300x250 AD

    ಅಂಕೋಲಾ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಬಿ.ಇಡಿ ಪ್ರಥಮ ಹಾಗೂ ತೃತಿಯ ಸೆಮಿಸ್ಟರನ ಫಲಿತಾಂಶ ಪ್ರಕಟಿಸಿದ್ದು ,ಪಟ್ಟಣದ ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಗಮನಾರ್ಹ ಸಾಧನೆ ಮಾಡಿ 100% ಫಲಿತಾಂಶ ದಾಖಲಿಸಿದೆ.

    ಪ್ರಥಮ ಸೆಮಿಸ್ಟರಲ್ಲಿ ವೇದಾವತಿ ಭಟ್ಟ 89.83% ಪಡೆದು ಪ್ರಥಮ, ಕವಿತಾ ಗೌಡ 89.50% ಪಡೆದು ದ್ವಿತೀಯ ಹಾಗೂ ಪೂಜಾ ಗೌಡ 88.83%ದೊಂದಿಗೆ ತೃತಿಯ ಸ್ಥಾನ ಪಡೆದಿದ್ದಾರೆ. ತೃತೀಯ ಸೆಮಿಸ್ಟರನಲ್ಲಿ ಪೂರ್ವಿ ಹಲ್ಗೇಕರ ಸರಾಸರಿ 94.67% ಅಂಕ ಪಡೆದು ಪ್ರಥಮ, ಕಾಂಚನಾ ಗುನಗಾ ಸರಾಸರಿ 93.83% ಅಂಕಪಡೆದು ದ್ವಿತೀಯ ಹಾಗೂ ಮೇಘನಾ ಮಡಿವಾಳ 93% ಅಂಕ ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.

    300x250 AD

    ಕಾಲೇಜಿನ ವಿದ್ಯಾರ್ಥಿಗಳ ಈ ಸಾಧನೆಗೆ ಕೆ.ಎಲ್.ಇ. ಸಂಸ್ಥೆಯ ಕಾರ್ಯದ್ಯಕ್ಷರಾದ ಡಾ. ಪ್ರಭಾಕರ ಕೋರೆ, ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯಾನಂದ ಮನವಳ್ಳಿ, ಸದಸ್ಯ ಕಾರ್ಯದರ್ಶಿಗಳಾದ ಮಹಾದೇವ ಬಳಿಗಾರ, ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ|| ಡಿ.ಎಲ್.ಭಟ್ಕಳ, ಸಂಯೋಜಕರಾದ ಆರ್. ನಟರಾಜ ಸದಸ್ಯರಾದ ಡಾ. ಮೀನಲ್ ನಾರ್ವೇಕರ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top