ಹೊನ್ನಾವರ : ತಾಲೂಕಿನ ಸಾಲಿಕೇರಿ ಹಗರಣಮಕ್ಕಿ ಕ್ರೀಡಾಂಗಣದಲ್ಲಿ ನಡೆದ ಸಾಲಿಕೇರಿ ಪ್ರೀಮಿಯರ್ ಲೀಗ್ 2022ರ ಚಾಂಪಿಯನ್ ಪಟ್ಟವನ್ನು ಶುಭಂ ವಾರಿಯರ್ಸ್ ತಂಡ ತನ್ನ ಹೆಗಲಿಗೇರಿಸಿಕೊಂಡಿದ್ದೆ.
ಆರು ತಂಡಗಳ ಎಸ್. ಪಿ. ಎಲ್ ಪಂದ್ಯಾವಳಿಯಲ್ಲಿ ಅಂತಿಮ ಪಂದ್ಯಾವಳಿ ನವೀನ ನಾಯ್ಕ ಮಾಲಿಕತ್ವದ ಶುಭಂ ವಾರಿಯರ್ಸ್ ಹಾಗೂ ಅನಂತ ಗೌಡ ಮಾಲಿಕತ್ವದ ಶಿವಾಜಿ ಫ್ರೆಂಡ್ಸ್ ತಂಡಗಳ ನಡುವೆ ರೋಚಕ ಹೋರಾಟದೊಂದಿಗೆ ಶುಭಂ ವಾರಿಯರ್ಸ್ ತಂಡ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿತು. ಶಿವಾಜಿ ಫ್ರೆಂಡ್ಸ್ ತಂಡ ರನ್ನರ್ ಅಪ್ ಆಗಿದೆ.
ಈ ಪಂದ್ಯಾವಳಿಯ ವೈಯಕ್ತಿಕ ಪ್ರಶಸ್ತಿಯ ಸರಣಿ ಶ್ರೇಷ್ಠರಾಗಿ ಕಿರಣ ದೇಶಭಂಡಾರಿ, ಬೆಸ್ಟ್ ಬ್ಯಾಟ್ಸ್ ಮ್ಯಾನ್ ರಾಮಚಂದ್ರ ಗೌಡ, ಬೆಸ್ಟ್ ಬೌಲರ್ ಚಂದ್ರು ಗೌಡ, ಫೈನಲ್ ಮ್ಯಾಚ್ ಪಂದ್ಯಶ್ರೇಷ್ಠ ಭಾಲಚಂದ್ರ ಗೌಡ ಇವರು ವೈಯಕ್ತಿಕ ಪ್ರಶಸ್ತಿಯನ್ನು ಪಡೆದರು.
ಪಂದ್ಯಾವಳಿಯನ್ನು ವೀಕ್ಷಿಸಲು ಅಪಾರ ಪ್ರಮಾಣದಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದರು. ಬಹುಮಾನ ವಿತರಣೆ ಸಮಾರಂಭ ಕಾರ್ಯಕ್ರಮದಲ್ಲಿ ಆರು ತಂಡದ ಮಾಲೀಕರುಗಳಾದ ನವೀನ ನಾಯ್ಕ, ಸುಬ್ರಮಣ್ಯ ಗೌಡ, ಅನಂತ ಗೌಡ, ನವೀನ ಭಂಡಾರಿ, ನಾರಾಯಣ ಗೌಡ, ಚಿದಾನಂದ ಗೌಡ,ಪಂಚಾಯತ ಸದಸ್ಯರಾದ ಗಿರೀಶ ಗೌಡ, ಕಾಶಿ ಗೌಡ,ಮುಂತಾದವರು ಹಾಜರಿದ್ದರು.