ಅಂಕೋಲಾ : ಕೋವಿಡ್ ಹಿನ್ನೆಲೆಯಲ್ಲಿ “ಜನರ ಜೀವ ಉಳಿಸಿ, ಜೀವನ ಉಳಿಸಿ, ಜೀವಿಸಲು ಬಿಡಿ” ಘೋಷಣೆಯಡಿಯಲ್ಲಿ ರಾಜ್ಯಾದ್ಯಂತ ಎಡ ಪಕ್ಷಗಳ ಜಂಟಿ ಹೋರಾಟದ ಕರೆಯ ಮೇರೆಗೆ ಸೋಮವಾರ ಅಂಕೋಲಾದಲ್ಲಿ ಸಿಪಿಐ(ಎಂ) ನಿಂದ ರಾಜ್ಯ ಸರಕಾರಕ್ಕೆ ತಹಶಿಲ್ದಾರರ ಮೂಲಕ ಮನವಿ ನೀಡಲಾಯಿತು,
ಹೋರಾಟದ ಮುಖ್ಯ ಬೇಡಿಕೆಗಳೆಂದರೆ ಕೋವಿಡ್ ಸಂಕಷ್ಟಕ್ಕೆ ಒಳಗಾದ ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ನಗದು ನೇರ ವರ್ಗಾವಣೆ ಮಾಡಿ, ತಲಾ ಹತ್ತು ಕೆ.ಜಿ.ಉಚಿತ ಪಡಿತರ ವಿತರಿಸಿ, ಕೋವಿಡ್ 3 ನೇ ಅಲೆ ನಿಯಂತ್ರಣಕ್ಕೆ ಶ್ರಮವಹಿಸಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಕ್ರಮವಹಿಸಿ, ಶುಲ್ಕ ಮನ್ನಾ ಮಾಡಿ, ಮನೆ ಆರೈಕೆಯಲ್ಲಿರುವ ಸೋಂಕಿತರಿಗೆ ನೆರವು ನೀಡಿ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆ ಜಾರಿ ಮಾಡಬೇಡಿ, ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ, ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಿರಿ, ಉದ್ಯೋಗ ಖಾತ್ರಿ ಕೆಲಸ 200 ದಿನಕ್ಕೆ ಹೆಚ್ಚಿಸಲು ಒತ್ತಾಯ, ಮುಂತಾದ ಬೇಡಿಕೆಗಳ ಮನವಿ ನೀಡಲಾಯಿತು.
ಪಕ್ಷದ ಜಿಲ್ಲಾ ಮುಖಂಡರಾದ ಶಾಂತಾರಾಮ ನಾಯಕ, ತಾ. ಮುಖಂಡರಾದ ಗೌರೀಶ ನಾಯಕ , ವೆಂಕಟರಮಣ ಗೌಡ ಮುಂತಾದವರು ಹಾಜರಿದ್ದರು.