ಅಂಕೋಲಾ : ಪಟ್ಟಣದ ಜೈಹಿಂದ ಮೈದಾನದಲ್ಲಿ ನಡೆದ ಪ್ರಜಾರಾಜ್ಯೋತ್ಸವ ಕ್ರಿಕೆಟ್ ಪಂದ್ಯಾವಳಿಯನ್ನು ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಉದ್ಘಾಟಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಅಂಕೋಲಾ ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಸೋಮವಾರ ಜೈಹಿಂದ ಕ್ರೀಡಾಂಗಣದಲ್ಲಿ ಆರಂಭವಾಯಿತು.
ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಲು ಇಂತಹ ಪಂದ್ಯಾವಳಿ ಅಗತ್ಯ ಎಂದರು.
ಪತ್ರಕರ್ತ ವಿಠ್ಠಲದಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾ.ಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ್, ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ್, ನ್ಯಾಯವಾದಿ ಸುಭಾಸ ನಾರ್ವೇಕರ್, ಪ್ರಮುಖರಾದ ಮಂಜುನಾಥ ನಾಯ್ಕ, ಸಂದೀಪ ಬಂಟ, ಪರ್ತಕರ್ತ ವಿದ್ಯಾಧರ ಮೊರಬಾ, ನ್ಯಾಯವಾದಿ ಉಮೇಶ ನಾಯ್ಕ, ಭಾಜಪಾ ಅಧ್ಯಕ್ಷ ಸಂಜಯ ನಾಯ್ಕ, ಸಮಾಜಸೇವಕ ಮತೀನ್ ಶೇಖ ಮತ್ತಿತರರು ಇದ್ದರು.
16 ತಂಡಗಳು ಈ ಪಂದ್ಯಾವಳಿಯನ್ನು ಆಡುತ್ತಿದ್ದಾರೆ. ಪತ್ರಕರ್ತ ಪಂದ್ಯಾವಳಿ ಸಂಘಟಕ ರಾಘು ಕಾಕರಮಠ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಸುಭಾಸ ಕಾರೇಬೈಲ್ ನಿರ್ವಹಿಸಿದರು. ಪರ್ತಕರ್ತ ಅರುಣ ಶೆಟ್ಟಿ ವಂದಿಸಿದರು.