ಶಿರಸಿ: ಇಲ್ಲಿನ ಉಪವಿಭಾಗ ವ್ಯಾಪ್ತಿಯ 220/11 ಕೆ.ವಿ ಉಪಕೇಂದ್ರದಲ್ಲಿ ಹೊಸದಾಗಿ ಶಕ್ತಿ ಪರಿವರ್ತಕ ಚಾಲನೆಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.28 ಶುಕ್ರವಾರ ಬೆಳಿಗ್ಗೆ 9 ರಿಂದ ಸಾಯಂಕಾಲ 6 ಗಂಟೆವರೆಗೆ ಪಟ್ಟಣ ಶಾಖೆಯ ಕಸ್ತೂರಬಾನಗರ 11 ಕೆ.ವಿ ಮಾರ್ಗದ ಕಸ್ತೂರಬಾನಗರ, ಕೆ.ಹೆಚ್.ಬಿ ಕಾಲೋನಿ ಪ್ರದೇಶಗಳಲ್ಲಿ, ಚಿಪಗಿ 11 ಕೆ.ವಿ ಮಾರ್ಗದ ಚಿಪಗಿ, ನಾರಾಯಣಗುರು ನಗರ ಪ್ರದೇಶ, ಗ್ರಾಮೀಣ-1 ಶಾಖೆಯ ಬಿಸಲಕೊಪ್ಪ 11 ಕೆ.ವಿ ಮಾರ್ಗದ ಪ್ರದೇಶ, ಬನವಾಸಿ ಶಾಖೆಯ ಭಾಷಿ, ಅಂಡಗಿ 11 ಕೆ.ವಿ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ ಮತ್ತು ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ತಿಳಿಸಿದ್ದಾರೆ.