ಭಟ್ಕಳ: ಇಲ್ಲಿನ ಪ್ರಸಿದ್ದ ಸೋಡಿಗದ್ದೆ ಮಹಾಸತಿ ದೇವಸ್ಥಾನದ ದಿನದ ಜಾತ್ರಾ ಮಹೋತ್ಸವದಲ್ಲಿ ವಿಷೇಶವಾದ ಕೆಂಡ ಸೇವೆಯಲ್ಲಿ ಹಲವು ಭಕ್ತರು ಪಾಲ್ಗೊಂಡು ಕೆಂಡ ಸೇವೆಯನ್ನು ನೆರವೇರಿಸಿದರು.
ಬೆಳಿಗ್ಗೆ 11 ಗಂಟೆಗೆ ಸಾಂಪ್ರದಾಯಕವಾಗಿ ಕೆಂಡ ಸೇವೆಗೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿಕೊಡುತ್ತಿದ್ದಂತೆ ಹಲವು ಭಕ್ತರು ಆಗಮಿಸಿ ಕೆಂಡ ಸೇವೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಹರಕೆಗಳನ್ನು ದೇವಿಯ ಸನ್ನಿಧಿಯಲ್ಲಿ ತೀರಿಸಿದರು. ವೃದ್ದರು, ಮಹಿಳೆಯರು, ಪುರುಷರು ಸೇರದಂತೆ ಹಲವು ಭಕ್ತರು ತಾವು ದೇವಿಯಲ್ಲಿ ಹೇಳಿಕೊಂಡ ಹರಕೆಗಳನ್ನು ಕೆಂಡದ ಮೇಲೆ ಹಾಯುವುದರ ಮೂಲಕ ನೆರವೇರಿಸಿದರು.
ಕೆಂಡ ಸೇವೆಗೆ ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ ದೇವಸ್ಥಾನದ ಆಡಳಿತಾಧಿಕಾರಿಯಾದ ತಹಶೀಲ್ದಾರ ರವಿಚಂದ್ರ ಕೆಂಡಸೇವೆಯನ್ನು ಕೆಲವು ಗಂಟೆಗಷ್ಟೇ ಸೀಮಿತಗೊಳಿಸಿ ಮೊಕಟುಗಳಿಸಿದರು. ಇದರಿಂದ ಆಕ್ರೋಶಗೊಂಡ ಕೆಂಡ ಸೇವೆ ಭಕ್ತರು. ತಹಶೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು ನಾವು ದೂರದ ಊರಿನಿಂದ ಬಂದಿದ್ದು,ಕೋವಿಡ್ ನೆಪವಿಟ್ಟುಕೊಂಡು ಬೇಗನೆ ಕೆಂಡೆ ಸೇವೆಯನ್ನು ಮುಕ್ತಾಯಗೊಳಿಸಿದ್ದಿರಾ, ಎಲ್ಲೂ ಇಲ್ಲದ ನಿಯಮಗಳನ್ನು ಇಲ್ಲಿಗೆ ತಂದಿದ್ದೀರಾ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳೀಯ ಸದಸ್ಯರು ಭಕ್ತರನ್ನು ಸಮಾಧಾನಗೊಳಿಸಿದರು.
ಇಂದು ಸಹ ಬೆಳಿಗ್ಗೆಯಿಂದಲೇ ಭಕ್ತರು ಸರದಿಯ ಸಾಲಿನಲ್ಲಿ ಭಕ್ತರು ದೇವಸ್ತಾನಕ್ಕೆ ಬಂದು ಮಹಾಸತಿ ದೇವಿಗೆ ಹಣ್ಣುಕಾಯಿ, ಪೂಜೆ ಸೇವೆಯನ್ನು ಭಕ್ತರು ಶೃದ್ದಾಭಕ್ತಿಯಿಂದ ನೀಡಿದರು. ಜಾತ್ರಾ ಪೇಟೆಯಲ್ಲಿ ಕೆಲವು ಅಂಗಡಿಗಳು ಕಾಣಿಸಿಕೊಂಡು ತಮ್ಮ ವ್ಯಾಪಾರವನ್ನು ಮುಂದುವರೆಸಿದರು. ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ದೇವಸ್ಥಾನದಲ್ಲಿ ಆಡಳಿತಯ ಮಂಡಳಿಯ ಸದಸ್ಯರು, ಸ್ಥಳೀಯ ಕಾರ್ಯಕರ್ತರು ದೇವಿಗೆ ಪೂಜೆಸೇವೆ, ಕೆಂಡ ಸೇವೆ ಮಾಡಲು ಅನುಕೂಲ ಕಲ್ಪಿಸಿದರು. ಗ್ರಾಮೀಣ ಠಾಣಾ ಪೊಲೀಸರು ಬಿಗಿ ಬಂದೋಬಸ್ತ ಏರ್ಪಡಿಸಿದ್ದರು.