• Slide
  Slide
  Slide
  previous arrow
  next arrow
 • ಕರ್ಜಗಿಯಲ್ಲಿ ಜಲ- ಪರಿಸರ ಅಧ್ಯಯನ ಕೇಂದ್ರ’ಕ್ಕೆ ಚಾಲನೆ ನೀಡಿದ ಕಾಗೇರಿ

  300x250 AD

  ಸಿದ್ದಾಪುರ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಕರ್ಜಗಿಯಲ್ಲಿ ಈಗಾಗಲೇ ಪರಿಸರ,ನೀರಾವರಿ,ಕೃಷಿಗೆ ಸಂಬಂಧಿಸಿದಂತೆ ಸಮಾಜಮುಖಿ ಕೆಲಸ ಮಾಡುತ್ತಿರುವ ಸ್ಥಳೀಯ ಮನುವಿಕಾಸ ಸ್ವಯಂಸೇವಾ ಸಂಸ್ಥೆಯವರು,ಹನ್ಸ್ ಸಿಡಲ್ ಇಂಡಿಯಾ ಫೌಂಡೇಷನ್ ಸಹಯೋಗದಲ್ಲಿ ಜಲ ಮತ್ತು ಪರಿಸರ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಯಿತು.

  ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಇಂದು ಅಕ್ಷರಸ್ಥರ ಸಂಖ್ಯೆ ಶೇ85 ರಷ್ಟಿದೆ ಆದರೂ ನೈತಿಕ ಅರ್ಧಪತನ ಹೆಚ್ಚಾಗುತ್ತಿದೆ ಜವಾಬ್ದಾರಿಯುತ ಶಿಕ್ಷಣ ನೀಡುವುದು ಇಂದಿನ ಅವಶ್ಯಕತೆಯಾಗಿದೆ. ನೀರು ನಮ್ಮ ಅವಶ್ಯಕತೆಗೆ ಬಹುಮುಖ್ಯವಾಗಿದೆ ಆದ್ದರಿಂದ ಮಳೆಯಿಂದ ಭೂಮಿಗೆ ಬರುವ ನೀರನ್ನು ಉಪಯೋಗಿಸುವ ತಂತ್ರಗಾರಿಕೆಯನ್ನು ರೂಪಿಸಬೇಕು. ಡ್ಯಾಮ್ ಕಟ್ಟುವ ಉದ್ದೇಶ ಕೇವಲ ನೀರು ಸಂಗ್ರಹಕ್ಕೆ ಮಾತ್ರವಾಗಿರಬಾರದು ಅದು ಜನರ ಜೀವನ ಸಾಗಿಸುವ ಅವಶ್ಯಕ ವಸ್ತುವೂ ಆಗಿರಬೇಕು ಇತ್ತೀಚಿನ ದಿನಗಳಲ್ಲಿ ನೀರು ಬೆಂಕಿ ಹಚ್ಚುವ ರಾಜಕೀಯಕ್ಕೆ ಬಳಸುವ ವಸ್ತುವೂ ಆಗಿರುವುದು ವಿಷಾದನೀಯವಾಗಿದೆ ಎಂದು ಹೇಳಿದರು.

  ಜಿಲ್ಲೆಯ ನದಿಗಳ ಕುರಿತಾದ ಅಧ್ಯಯನಗಳ ವರದಿ ಬಿಡುಗಡೆಗೊಳಿಸಿದ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ,ನಮ್ಮ ಜಿಲ್ಲೆಯಲ್ಲಿ ಐದು ನದಿಗಳು ಹರಿಯುತ್ತಿದ್ದು ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೂ ನೀರಿನ ಹಂಚಿಕೆಯ ವಿಷಯದಲ್ಲಿ ಆಡಳಿತ ನಡೆಸಿದವರು ವಿಫಲವಾಗಿರುವುದರಿಂದ ಬರಗಾಲ ಮತ್ತು ಪ್ರವಾಹ ಎರಡನ್ನು ಎದುರಿಸಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಐದು ನದಿಗಳಿಂದ ಸುಮಾರು 380 ಟಿ.ಎಂ.ಸಿ ನೀರು ಸಮುದ್ರದ ಪಾಲಾಗುತ್ತಿದೆ ಇದನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಬೇಕು

  ಶಿರಸಿಯ ಪೂರ್ವ ಭಾಗ ಮತ್ತು ಮುಮಡಗೋಡು ತಾಲೂಕು 14 ವರ್ಷ ಬರಗಾಲವನ್ನು ಅನುಭವಿಸಿದೆಲಾದರೆ ಈಗ ಆ ಭಾಗದಲ್ಲಿ ಮನುವಿಕಾಸದಂತಹ ಸ್ವಯಂ ಸೇವಾ ಸಂಸ್ಥೆ ಕೆರೆಗಳ ಹೂಳೆತ್ತಿ ನೀರು ಸಂಗ್ರಹಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಬರಗಾಲ ದೂರವಾಗಿದೆ. 1964ರಲ್ಲೆ ಮುಂಡಗೋಡು ಭಾಗದ ಶಾಸಕರಾಗಿದ್ದ ದಿ.ರಾಮಕೃಷ್ಣ ಹೆಗಡೆಯವರು 7 ಡ್ಯಾಮ್ ನಿರ್ಮಿಸಿದ್ದರಿಂದ ಕುಡಿಯುವ ನೀರಿನ ಸಮಸ್ಯೆ ಬರಲಿಲ್ಲ ಎಂದು ಹೇಳಿದರು.

  300x250 AD

  ಕೃಷಿಕ ಮತ್ತು ಕೃಷಿಕಾರ್ಮಿಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಷ್ಟೋ ಬಾಗದಲ್ಲಿ ಮಳೆಗಾಲ ಹೊರತು ಪಡಿಸಿ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುವುದಿಲ್ಲ ಇದರಿಂದ ಕೃಷಿಕ ಮತ್ತು ಕೃಷಿಕಾರ್ಮಿಕ ಆರ್ಥಿಕವಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ ಆದ್ದರಿಂದ ಕೆರೆಗಳಿಗೆ ನೀರು ತುಂಬಿಸುವ ಕೆಲಸವಾಗಬೇಕು. ಬಹುಬೆಳೆ ಮೂಲಕ ಕೃಷಿಕನ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಈ ಬಾರಿಯ ಬಜೆಟ್ ಪೂರ್ವದ ಸಚಿವ ಸಂಪುಟ ಸಭೆಯಲ್ಲಿ ಕೆರೆಗಳಿಗೆ ನೀರುತುಂಬಿಸುವ ಯೋಜನೆ ಹಾಗೂ ನೀರು ಬಳಕೆದಾರರ ಸಂಘದ ರಚನೆಯ ಬಗ್ಗೆ ಪ್ರಸ್ತಾಪಿಸಿ ಈ ಯೋಜನೆ ಜಾರಿಗೆ ತರಲು ಒತ್ತಾಯಿಸುತ್ತೇನೆ ಎಂದು ಸಚೀವ ಹೆಬ್ಬಾರ ಹೇಳಿದರು.

  ಸಭೆಯಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹಾಗೂ ಕಲಘಟಕಿ ಶಾಸಕ ಸಿ.ಎಂ.ನಿಂಬಣ್ಣನವರ,ಮನುವಿಕಾಸ ಸಂಸ್ಥೆಯ ಗೌರಾವಾಧ್ಯಕ್ಷ ಹರೀಶ್ಚಂದ್ರ ಭಟ್ಟ ಮಾತನಾಡಿದರು. ನಿರ್ದೇಶಕ ಗಣಪತಿ ಭಟ್ಟ ಸ್ವಾಗತಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top