• Slide
    Slide
    Slide
    previous arrow
    next arrow
  • ಜ.26ಕ್ಕೆ ವಿಶ್ವದರ್ಶನ ವತಿಯಿಂದ ಅಷ್ಟಾವಧಾನ ಕಾರ್ಯಕ್ರಮ

    300x250 AD

    ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ) ವತಿಯಿಂದ ನಾಯ್ಕನಕೆರೆಯ ಶಾರದಾಂಬಾ ದೇವಾಲಯದ ಆವಾರದಲ್ಲಿ ಜನವರಿ 26ರಂದು ಬೆಳಗ್ಗೆ 10ಗಂಟೆಗೆ ‘ಅಷ್ಟಾವಧಾನ’ ಕಾರ್ಯಕ್ರಮ ನಡೆಯಲಿದೆ.


    ಅವಧಾನಿ ಗಣೇಶ ಕೊಪ್ಪಲತೋಟ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪ್ರಚ್ಛಕರಾಗಿ ವಿದ್ವಾಂಸರಾದ ರಾಜಶೇಖರ ಧೂಳಿ, ವಿಘ್ನೇಶ್ವರ ಭಟ್ಟ ಬಿಸಗೋಡ್, ಮಹೇಶ ಭಟ್ಟ ಇಡಗುಂದಿ, ನರಸಿಂಹ ಭಟ್ಟ ಕವಡಿಕೆರೆ, ಗಣಪತಿ ಭಟ್ಟ ಕೋಲಿಬೇಣ, ತಿಮ್ಮಣ್ಣ ಭಟ್ಟ ಬೆಂಗಳೂರು, ವೆಂಕಟ್ರಮಣ ಭಟ್ಟ ಚಂದ್ಗುಳಿ, ಪೂರ್ಣಿಮಾ ಉಪಾಧ್ಯಾಯ ಭಾಗವಹಿಸಲಿದ್ದಾರೆ. ಕೋವಿಡ್ ನಿಯಮಾವಳಿಗಳಿಗೆ ಒಳಪಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

    300x250 AD

    ಅಷ್ಟಾವಧಾನ: ಏಕಕಾಲಕ್ಕೆ ಅನೇಕ ವಿಷಯದಲ್ಲಿ ಲಕ್ಷ್ಯವನ್ನು ಕೆಂದ್ರೀಕರಿಸುವ ಕಲೆಯನ್ನು ಆಹ್ವಾದಿಸುವ ಪ್ರಕ್ರಿಯೆಗೆ ಅಷ್ಟಾವಧಾನ ಎನ್ನಲಾಗುತ್ತದೆ. ಸಂಖ್ಯಾಶಾಸ್ತ್ರ, ಹಾಸ್ಯ, ಕಾವ್ಯ ವಾಚನ, ಚಿತ್ರ ಮೊದಲಾದ ಕಲೆಗಳನ್ನು ಒಂದೇ ವೇದಿಕೆಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ

    Share This
    300x250 AD
    300x250 AD
    300x250 AD
    Leaderboard Ad
    Back to top