ಶಿರಸಿ: ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದೆ ಮೊದಲ ಬಾರಿಗೆ ಲೇಸರ್ ಚಿಕಿತ್ಸೆಯ ಸಹಾಯದಿಂದ ಮಹಿಳೆಯ ಕಿಡ್ನಿಯೊಳಗಿದ್ದ ಕಲ್ಲನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ.
ಕೇವಲ ಖಾಸಗಿ ಆಸ್ಪತ್ರೆಗೆ ಸೀಮಿತವಾಗಿದ್ದ ಲೇಸರ್ ಚಿಕಿತ್ಸೆ ಈಗ ಶಿರಸಿ ಸರಕಾರಿ ಆಸ್ಷತ್ರೆಯಲ್ಲೂ ವ್ಯವ್ಯಸ್ಥಿತ ರೀತಿಯಲ್ಲಿ ಚಿಕಿತ್ಸೆ ನಡೆಸಿ ಯಶಸ್ವಿಯಾಗಿರುವುದು ಎಲ್ಲರಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ.
ಕಾರವಾರದ 53 ವರ್ಷದ ಮಹಿಳೆಯೊಬ್ಬರಿಗೆ ಕಿಡ್ನಿಯಲ್ಲಿ ಕಲ್ಲು ಬೆಳೆದಿತ್ತು, ಅವರು ಕಾರವಾರದಲ್ಲಿ ಡಾ ಗಜಾನನ ಭಟ್ ಅವರನ್ನು ಸಂಪರ್ಕಿಸಿ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಮಂಗಳವಾರ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಡಾ. ಗಜಾನನ ಭಟ್ ಲೇಸರ್ ಚಿಕಿತ್ಸೆಯ ಸಹಾಯದಿಂದ ಸತತ ಪ್ರಯತ್ನದ ಮೂಲಕ ಕಲ್ಲನ್ನು ಒಡೆದು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಪ್ರಯೋಗದಲ್ಲಿ ಯಶಸ್ವಿ ಕಂಡ ವೈದ್ಯರು ಮುಂದಿನ ದಿನಗಳಲ್ಲಿ ಲೇಸರ್ ಚಿಕಿತ್ಸೆ ಮೂಲಕ ಕಿಡ್ನಿ ಸ್ಟೊನ್ ತೆಗೆಯಲು ಉತ್ಸುಕರಾಗಿದ್ದಾರೆ.