
ಯಲ್ಲಾಪುರ: ಪಟ್ಟಣದ ಹಿಂದೂ ರುದ್ರಭೂಮಿಯ ಬಳಿ ಹಳ್ಳದಲ್ಲಿ ಬೈಕ್ ಬಿದ್ದು ಸವಾರ ಮೃತಪಟ್ಟ ಘಟನೆ ರವಿವಾರ ಬೆಳಗಿನ ಜಾವ ನಡೆದಿದೆ.
ಮೃತ ಸವಾರನನ್ನು ಫ಼ಯಾನ್ ಸ್ವಪನ್ ಬ್ಯಾನರ್ಜಿ ಕೊಲ್ಕತ್ತಾ ಎಂದು ಗುರುತಿಸಲಾಗಿದೆ.
ಬುಲೆಟ್ ಬೈಕ್ ನಲ್ಲಿ ಕಲಘಟಗಿಕಡೆಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದ್ದು ಈ ಕುರಿತು ಯಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.