• Slide
    Slide
    Slide
    previous arrow
    next arrow
  • ಅತಿಕ್ರಮಣ ಒಕ್ಕಲೆಬ್ಬಿಸುವಿಕೆ; ಪೊಲೀಸ್ ಇಲಾಖೆ ದುರ್ಬಳಕೆ ಕುರಿತು ಚರ್ಚೆಗೆ ಆಗ್ರಹ

    300x250 AD

    ಶಿರಸಿ: ಅರಣ್ಯ ಇಲಾಖೆಯ ಒಕ್ಕಲೆಬ್ಬಿಸುವ ಪ್ರಕ್ರೀಯೆಯಲ್ಲಿ ಪೊಲೀಸ್ ಇಲಾಖೆಗೆ ತಪ್ಪು ಮಾಹಿತಿ ನೀಡಿ ಪೋಲೀಸ್ ಇಲಾಖೆಯಿಂದ ಅರಣ್ಯವಾಸಿಗಳಿಗೆ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಹೋರಾಟಗಾರರ ನಿಯೋಗದೋಂದಿಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅವರ ಜೊತೆಯಲ್ಲಿ ಚರ್ಚಿಸಲು ಅವಧಿ ನಿಗದಿಗೊಳಿಸುವಂತೆ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹಿಸಿದೆ.

    ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಶಿರಸಿ ಡಿವೈಎಸ್‌ಪಿ ರವಿ ಡಿ ನಾಯ್ಕ ಅವರಿಗೆ ಇಂದು ವೇದಿಕೆ ನಿಯೋಗ ಭೇಟಿಯಾಗಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪರವಾಗಿ ನೀಡಿದ ಮನವಿ ಪತ್ರದಲ್ಲಿ ಮೇಲಿನಂತೆ ಅಗ್ರಹಿಸಲಾಗಿದೆ.


    ಇತ್ತೀಚಿನ ದಿನಗಳಲ್ಲಿ ಜಿಲ್ಲಾದ್ಯಂತ ಅರಣ್ಯವಾಸಿಗಳ ಮೇಲೆ ಕಾನೂನು ಬಾಹಿರವಾಗಿ ಒಕ್ಕಲೆಬ್ಬಿಸುವ ಪ್ರಕ್ರೀಯೆ ಜರಗುತ್ತಿದ್ದದ್ದು ವಿಷಾದಕರ. ಅರಣ್ಯ ಸಿಬ್ಬಂದಿಗಳು ಕಾನೂನು ಬಾಹಿರವಾಗಿ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಅರಣ್ಯ ಇಲಾಖೆಯು ತಪ್ಪು ಮಾಹಿತಿ ನೀಡಿ ಕಾನೂನು ದುರ್ಬಳಿಕೆ ಮಾಡಿಕೊಳ್ಳುವ ಮತ್ತು ಅರಣ್ಯವಾಸಿಗಳ ವಿರುದ್ಧ ಪೊಲೀಸ್ ಇಲಾಖೆಯಿಂದ ಅರಣ್ಯವಾಸಿಗಳ ಮೇಲೆ ಕಾನೂನು ಕ್ರಮ ಜರುಗುತ್ತಿರುವುದು ಹಾಗೂ ಅರಣ್ಯವಾಸಿಗಳು ಅರಣ್ಯ ಸಿಬ್ಬಂದಿಗಳ ಮೇಲೆ ದಾಖಲಿಸಿದ ಕ್ರೀಮಿನಲ್ ಪ್ರಕರಣಕ್ಕೆ ಮಾನ್ಯತೆ ಸಿಗದೇ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದ ಅರಣ್ಯವಾಸಿ ಹೋರಾಟಗಾರರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠರೊಂದಿಗೆ ಚರ್ಚಿಸಲು ವೇದಿಕೆ ನಿರ್ಧರಿಸಿದೆ ಎಂದು ವೇದಿಕೆಯು ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದೆ.

    300x250 AD

    ನಿಯೋಗದಲ್ಲಿ ಜಿಲ್ಲಾ ಸಂಚಾಲಕ ಉದಯ ನಾಯ್ಕ, ತಾಲೂಕ ಅಧ್ಯಕ್ಷ ಲಕ್ಷ್ಮಣ ಮಾಳ್ಳಕ್ಕನವರ, ಜಿಲ್ಲಾ ಯುವ ಘಟಕ ಸಂಚಾಲಕ ಶಿವಾನಂದ ಪೂಜಾರಿ, ತಾಲೂಕ ಯುವ ಘಟಕ ಸಂಚಾಲಕ ನಾರಾಯಣ ಗೌಡ ಕಕ್ಕಳ್ಳಿ, ತಾಲೂಕ ಸಂಚಾಲಕ ಇಬ್ರಾಹಿಮ್ ಇಮಾಮ್ ಸಾಬ್ ಗೌಡಳ್ಳಿ ಮುಂತಾದವರು ಉಪಸ್ಥಿತರಿದ್ದರು.

    ಹಿಂದಿನ ಮನವಿಗೆ ಪುರಸ್ಕಾರವಿಲ್ಲ: ಅರಣ್ಯ ಇಲಾಖೆಯು ಪೊಲೀಸ್ ಇಲಾಖೆಯ ಸಹಕಾರ ಪಡೆದು ಅರಣ್ಯವಾಸಿಗಳ ಮೇಲೆ ದೌರ್ಜನ್ಯ ವೆಸಗುವ ಪ್ರವೃತ್ತಿಯ ಕುರಿತು ಚರ್ಚಿಸಲು ಮತ್ತು ಅರಣ್ಯವಾಸಿಗಳಿಗೆ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ಪೊಲೀಸ್ ಇಲಾಖೆಗೆ ಹಲವಾರು ಲಿಖಿತ ಮನವಿ ನೀಡಿದ್ದಾಗಿಯೂ ಸ್ಫಂದನೆ ಸಿಗದೇ ಇರುವುದು ಖೇದಕರ ಎಂದು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top