ಅಂಕೋಲಾ: ಜಿಲ್ಲೆಯಲ್ಲಿ ಕೊರೊನಾ ಕೇಸ್ ಹೆಚ್ಚಳದ ಜೊತೆ ಕೊರೊನಾ ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಿದೆ. ಅದರಂತೆ ಸೋಮವಾರ ಒಟ್ಟೂ 699 ಕೇಸ್ ವರದಿಯಾಗಿದ್ದು, ಕೊರೊನಾದಿಂದಾಗಿ ಒಬ್ಬರು ಸಾವನ್ನಪ್ಪಿದ್ದಾರೆ.
ಇಂದು ಯಲ್ಲಾಪುರದಲ್ಲಿ ಅತೀಹೆಚ್ಚು 123 ಕೇಸ್, ಕಾರವಾರ 100, ಅಂಕೋಲಾ 29, ಕುಮಟಾ 52, ಹೊನ್ನಾವರ 45, ಭಟ್ಕಳ 44, ಶಿರಸಿ 75, ಮುಂಡಗೋಡ 44, ಹಳಿಯಾಳದಲ್ಲಿ 108, ಜೋಯಿಡಾದಲ್ಲಿ 29 ಕೇಸ್ ದೃಢಪಟ್ಟಿದೆ.
ಕಾರವಾರದಲ್ಲಿ ಕೊರೊನಾಕ್ಕೆ ಒಬ್ಬರು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 797ಕ್ಕೆ ತಲುಪಿದೆ. ಸದ್ಯ 2824 ಕೇಸ್ ಸಕ್ರಿಯವಾಗಿದೆ. ಸೋಮವಾರ 728 ಮಂದಿ ಗುಣಮುಖರಾಗಿದ್ದಾರೆ.