ಹಳಿಯಾಳ: ನೀರು ಕುಡಿಯಲೆಂದು ಆಕಳಿನ ಜೊತೆ ಬಂದಿದ್ದ ಕರುವೊಂದನ್ನು ಮೊಸಳೆಯೊಂದು ಎಳೆದುಕೊಂಡು ಹೋದ ಘಟನೆ ಇಂದು ನಗರದ ಬೈಮುಪಾರು-ಐಪಿಎಂ ಸೇತುವೆಯ ಹತ್ತಿರ ಕಾಳಿ ನದಿಯಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಮೊಸಳೆಗಳಿಂದ ದುರ್ಘಟನೆಗಳು ನಡೆಯಲು ಆರಂಭವಾಗಿದ್ದು, ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಬೈಲುಪಾರು-ಐಪಿಎಂ ಸೇತುವೆಯ ಬಳಿ ಆಕಳಿನ ಜೊತೆಗೆ ನೀರು ಕುಡಿಯುತ್ತಿರುವ ಸಂದರ್ಭದಲ್ಲಿ ಮೊಳಸೆ ಕರುವನ್ನು ಎಳೆದುಕೊಂಡು ಹೋಗಿರುವುದನ್ನು ಸ್ಥಳೀಯರು ನೋಡಿದ್ದಾರೆ.ಮೊಸಳೆ ಕರುವನ್ನು ಸಾಯಿಸಿರುವುದು ಬೆಳಕಿಗೆ ಬಂದಿದೆ. ಇನ್ನು ನದಿ ಪಾತ್ರದ ಜನರು ಬಹಳಷ್ಟು ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.