• Slide
    Slide
    Slide
    previous arrow
    next arrow
  • ಮೂಲಭೂತ ಅವಶ್ಯಕತೆ ಪೂರೈಸುವುದು ನಮ್ಮಆದ್ಯ ಕರ್ತವ್ಯ; ಅಧ್ಯಕ್ಷೆ ವೀಣಾ ಗಾಂವ್ಕಾರ

    300x250 AD

    ಯಲ್ಲಾಪುರ: ಗ್ರಾಮೀಣ ಪ್ರದೇಶದಲ್ಲಿ ಜನರ ಜೀವನಮಟ್ಟ ಸುಧಾರಿಸಬೇಕಿದೆ. ಮೂಲಭೂತವಾದ ಅವಶ್ಯಕತೆಯನ್ನು ಪೂರೈಸುವುದು ಪಂಚಾಯತದ ಅದ್ಯ ಕರ್ತವ್ಯವಾಗಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಗಾಂವ್ಕಾರ ಅಭಿಪ್ರಾಯಪಟ್ಟರು.

    ಅವರು ವಜ್ರಳ್ಳಿಯ ಗ್ರಾಮ ಪಂಚಾಯತ ಆವರಣದಲ್ಲಿ ಜರುಗಿದ ಗ್ರಾಮ ಸಭೆಯ ಅಧ್ಯಕ್ಷೆತೆ ವಹಿಸಿ ಮಾತನಾಡುತ್ತಿದ್ದರು. ಮಳೆಯಿಂದ ಪ್ರಾಕೃತಿಕ ಹಾನಿಯಾದ ಜಮೀನಿನನ್ನು ಉದ್ಯೋಗ ಖಾತರಿ‌ ಯೋಜನೆಯಲ್ಲಿ ಅಭಿವೃದ್ಧಿಪಡಿಸಬಹುದು. ಕ್ರಿಯಾಯೋಜನೆಯಲ್ಲಿ ಹೆಸರು ಸೇರಿಸಿ ಕೆಲಸವನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

    ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಮ ಪಂಚಾಯತ ಸದಸ್ಯ ಗಜಾನನ ಭಟ್ಟ ಕಳಚೆ ಮಾತನಾಡಿ ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ರಾಜಕಾರಣವಿಲ್ಲಾ. ಜನಪ್ರತಿನಿಧಿಗಳು ಅಧಿಕಾರಿಗಳ ಸಹಕಾರದಲ್ಲಿ ಸರ್ಕಾರದ‌ ಸೌಲಭ್ಯವನ್ನು ಪ್ರಾಮಾಣಿಕವಾಗಿ ತಲುಪಿಸುತ್ತಿದ್ದೇವೆ‌. ಪಾರದರ್ಶಕತೆಯ ಆಡಳಿತದಲ್ಲಿ ವಾರ್ಷಿಕ ಗುರಿ ಸಾಧಿಸಲಾಗಿದೆ ಎಂದರು.

    300x250 AD

    ಗ್ರಾಮ ಪಂಚಾಯತ ಸದಸ್ಯರಾದ ಜಿ ಆರ್ ಭಾಗ್ವತ ಮಾತನಾಡಿ ಉದ್ಯೋಗ ಖಾತರಿ‌ ಯೋಜನೆಯಲ್ಲಿ ಕೆಲವು ಮಾರ್ಪಡು ಅಗತ್ಯವಿದೆ ಎಂದರು.

    ತಿಮ್ಮಣ್ಣ ಗಾಂವ್ಕಾರ, ಭಗೀರಥ ನಾಯ್ಕ, ಗಂಗಾ ಕೋಮಾರ, ಲಲಿತಾ ಸಿದ್ದಿ ನೋಡೆಲ್ ಅಧಿಕಾರಿ, ಕೃಷಿ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ, ಉಪಸ್ಥಿತರಿದ್ದರು. ಆರಂಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಂತೋಷಿ ಆರ್ ಬಂಟ್ ಸ್ವಾಗತಿಸಿದರು. ಚಂದ್ರಹಾಸ ನಾಯ್ಕ ಕ್ರಿಯಾಯೋಜನೆ ಯ ವರದಿ ವಾಚಿಸಿದರು. ಕಾರ್ಯದರ್ಶಿ ಜಿ ಎಸ್ ಪತ್ರೇಕರ್ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top