ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿವೇಕಾನಂದ ಸಮಾಜ ವಿಜ್ಞಾನ ಸಂಘವು ಪ್ರೌಢಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನದ ಭಾರತದ ನಕ್ಷೆ ಬಿಡಿಸುವ ಸ್ಪರ್ಧೆ ಆಯೋಜಿಸಿತ್ತು.
ವಿದ್ಯಾರ್ಥಿಗಳು ಭಾರತದ ಭೌಗೋಳಿಕ ವಿಭಾಗಗಳನ್ನು ವಿಭಿನ್ನತೆ ಯಲ್ಲಿ ದಾಖಲಿಸಿ ಪ್ರಮುಖ ಸ್ಥಳಗಳನ್ನು ವಿವಿಧ ಬಣ್ಣಗಳ ಮುಖೇನ ಚಿತ್ರಿಸುವ ಮೂಲಕ ಆಕರ್ಷಣೀಯವಾಗಿ ಸಾದರಪಡಿಸಿದರು.
ಮಾರ್ಗದರ್ಶಿ ಹಾಗೂ ಸಮಾಜ ಶಿಕ್ಷಕ ಚಿದಾನಂದ ಹಳ್ಳಿ ಸ್ಪರ್ಧೆಯನ್ನು ಸಂಘಟಿಸಿದ್ದರು.ಶಿಕ್ಷಕಿ ಸರೋಜಾಭಟ್ಟ,ದತ್ತಾತ್ರೇಯ ಭಟ್ಟ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.