
ಭಟ್ಕಳ: ಲಾರಿ ಮತ್ತು ಆಕ್ಟಿವಾ ಬೈಕ್ ನಡುವೆ ಭೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಭಟ್ಕಳ ತಾ.ಪಂ ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಮೃತನನ್ನು ಜಾಮಿಯಾಬಾದ್ ಮದೀನಾ ಕಾಲೋನಿ ನಿವಾಸಿ ಅಬ್ದುಲ್ ಖಾದಿರ್ ಇಶ್ತಿಯಾಕ್ ಎಂದು ಗುರುತಿಸಲಾಗಿದೆ.
ಬೈಕ್ ಸವಾರ ರಸ್ತೆ ದಾಟುವ ವೇಳೆ ಅಪಘಾತ ನಡೆದಿದೆಯೆಂದು ಹೇಳಲಾಗಿದ್ದು ಲಾರಿಯ ಚಕ್ರ ಬೈಕ್ ಸವಾರನ ತಲೆಯ ಮೇಲೆ ಹತ್ತಿ ಹೆಲ್ಮೆಟ್ ಧರಿಸಿದ್ದರೂ ತಲೆಭಾಗ ಛಿದ್ರಛಿದ್ರವಾಗಿದ್ದು ಗುರುತು ಪತ್ತೆ ಹಚ್ಚಲಾಗದ ಸ್ಥಿತಿಯಲ್ಲಿ ಶವ ಬಿದ್ದಿದೆ. ಸ್ಥಳಕ್ಕೆ ಪೋಲೀಸರು ಬಂದು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.