ಕುಮಟಾ: ಡಾ. ಎ. ವಿ. ಬಾಳಿಗಾ ಮಹಾವಿದ್ಯಾಲಯಕ್ಕೆ ಪೂಣಾದ ಕೆ.ಟಿ.ಆರ್ ಕಪಲಿಂಗ (ಇಂಡಿಯಾ) ಪ್ರೈ. ಲಿಮಿಟೆಡ್ ಸಿ.ಎಸ್.ಆರ್.ಯೋಜನೆಯ ಅಡಿಯಲ್ಲಿ ರೂ. 25 ಲಕ್ಷ ವೆಚ್ಚದ ಆಧುನಿಕ ಸುಸಜ್ಜಿತ ಶೌಚಾಲಯ ಸಮುಚ್ಛಯದ ಕೋನ ಶಿಲಾನ್ಯಾಸವು ಕಳೆದ ಗುರುವಾರ ಮುಂಜಾನೆ ಕೆನರಾ ಕಾಲೇಜು ಸೊಸೈಟಿಯ ಉಪಾಧ್ಯಕ್ಷರಾದ ಪುರುಷೋತ್ತಮ ಮುಕುಂದ ಶಾನಭಾಗ ಹೆಗಡೇಕರ ಯಜಮಾನತ್ವದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಆಲಮಿನಿ ಸದಸ್ಯರು, ಶಿಕ್ಷಕ ವಿದ್ಯಾರ್ಥಿ ವೃಂದದ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಸಕಲ ಧಾರ್ಮಿಕ ವಿಧಿ, ವಿಧಾನಗಳೊಂದಿಗೆ ಜರುಗಿತು.
ಕೆ.ಟಿ.ಆರ್ ಕಪಲಿಂಗ ಇಂಡಿಯಾದ ಮೆನೇಜಿಂಗ್ ಡೈರೆಕ್ಟರ್‍ರಾದ ಶಿವಶಂಕರ ಕೃಷ್ಣ ಪಿಕಳೆಯವರ ವಿಶೇಷ ಪ್ರಯತ್ನದಿಂದ ಈ ಕೊಡುಗೆಯು ಸಂಸ್ಥೆಗೆ ಲಭ್ಯವಾಗಿದ್ದು, ಶ್ರೀಯುತರು ಮಾತೃಸಂಸ್ಥೆಯ ಅಲಮನಿ ಕ್ರಿಯಾಶೀಲ ಟ್ರಸ್ಟಿಗಳಾಗಿದ್ದು ತುಂಬಾ ಉತ್ಸುಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಮಾರಂಭದ ನಂತರ ಸೊಸೈಟಿಯ ಉಪಾಧ್ಯಕ್ಷರಾದ ಪುರುಷೋತ್ತಮ ಮುಕುಂದ ಶಾನಭಾಗ ಹೆಗಡೇಕರರ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ಕೆ ಸ್ವಾಗತ ಕೋರಿದರು.
ಸೊಸೈಟಿಯ ಕಾರ್ಯದರ್ಶಿಯಾದ ಸುಧಾಕರ ನಾಯಕರು ಸಂಸ್ಥೆಗಳ ಸರ್ವಾಂಗೀಣ ವಿಕಾಸಕ್ಕಾಗಿ ಅಲವನಿ ಮಾಡುತ್ತಿರುವ ಅಹರ್ನಿಶ ಪ್ರಯತ್ನ ಶ್ರೀ ಶಿವಶಂಕರ ಪಿಕಳೆಯವರ ಆದರ್ಶದ ಕುರಿತು ಪ್ರಶಂಸಿಸಿದರಲ್ಲದೆ, ಸಂಸ್ಥೆಯ ಈ ಮಹಾನ್ ಕಾರ್ಯಕ್ಕೆ ಸರ್ವರ ಸಹಾಯ, ಸಹಕಾರಯುಕ್ತ ಯೋಗದಾನತ್ವವನ್ನು ಯಾಚಿಸಿದರು.
ಇನ್ನೋರ್ವ ಸದಸ್ಯರಾದ ತರಂಗ ಇಲೆಕ್ಟ್ರಾನಿಕ್ ಮಾಲಕರಾದ ಶ್ರೀಕಾಂತ ಭಟ್ಟರು, ಅಲಮನಿ ಟ್ರಸ್ಟಿನ ಅಧ್ಯಕ್ಷಾದ ಶ್ರೀ ವಿಜಯ ಕುಮಾರ, ಕಾರ್ಯದರ್ಶಿಯವರಾದ ಶ್ರೀಮತಿ ಜ್ಯೋತಿ ಪೈಯವರ ದೂರದರ್ಶಿತ್ವ ಕಾರ್ಯಸಾಧನೆ, ಅಲಮನಿಯ ಉದ್ದೇಶವನ್ನು ವಿವರಿಸಿ ಸರ್ವರ ಸಹಾಯ ಸಹಕಾರವನ್ನು ಸಹಭಾಗಿತ್ವವನ್ನು ಕೋರಿದರು.
ಅಲಮನಿಯ ಇನ್ನೋರ್ವ ಸದಸ್ಯರಾದ ನಿವೃತ್ತ ಮುಖ್ಯಾಧ್ಯಾಪಕರಾದ ಶ್ರೀ ಮುರಲಿ ಮಾಸ್ತರರು, ಸೊಸೈಟಿ ಮತ್ತು ಅಲಮನಿಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಇದ್ದು, ಇವೆರಡರ ಸಹಕಾರ, ಪೂರಕತ್ವದಲ್ಲಿ ಯೋಜಿತ ಸರ್ವಕಾರ್ಯಗಳು ಇ.ಸನ್ 2024ರಲ್ಲಿ ಆಚರಿಸಲ್ಪಡುವ ಸಂಸ್ಥೆಯ ಅಮೃತಮಹೋತ್ಸವದ ಒಳಗೆ ಪೂರ್ಣಗೊಳ್ಳುವಂತೆ ಸರ್ವರ ಸಹಕಾರ ಯಾಚಿಸಿದರು.
ಸಂಸ್ಥೆಯ ಪ್ರಾಚಾರ್ಯರಾದ ಡಾ| ಪಿ.ಕೆ.ಭಟ್ಟರು ಕಾರ್ಯಾಧ್ಯಕ್ಷರಾದ ದಿನಕರ ಕಾಮತರ ಅವಿರತ ಪ್ರಯತ್ನ, ಕ್ರಿಯಾಶೀಲತ್ವದ ಕುರಿತು ಶ್ಲಾಘಿಸಿದರಲ್ಲದೇ, ಪಿಕಳೆಯವರಿಗೂ ತುಂಬು ಹೃದಯದಿಂದ ಅಭಿನಂದಿಸಿದರು. ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.