
ಭಟ್ಕಳ: ಕಾಂಗ್ರೆಸ್ ಪಕ್ಷದ ವತಿಯಿಂದ ಹಳ್ಳಿಹಳ್ಳಿಗೆ ತೆರಳಿ ಸಹಾಯ ಹಸ್ತ ಕಾರ್ಯಕ್ರಮದ ಮೂಲಕ ಜನತೆಯ ಕಣ್ಣಿರನ್ನು ಒರೆಸುವ ಕಾರ್ಯ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದರು.
ಭಟ್ಕಳದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಸಹಾಯಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಸುಳ್ಳಿನಿಂದಲೇ ಸರ್ಕಾರ ನಡೆಸುತ್ತಿದ್ದಾರೆ. ಕೊರೊನಾ ಕಷ್ಟದ ನಡುವೆಯೂ ಜನರಕಣ್ಣಿಗೆ ಮಣ್ಣೆರಚಿ ದುರಾಡಳಿತ ಮಾಡುತ್ತಿದ್ದಾರೆ. ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಸರ್ಕಾರ ವಿಫಲವಾಗಿದೆ. ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆಯಲ್ಲೂ ಮೋಸ ಮಾಡಿ ಸುಳ್ಳು ಹೇಳುತ್ತಿದೆ ಎಂದರು.
ಜನತೆಯ ಬೆಂಬಲವಾಗಿ ನಿಂತು ಕಾಂಗ್ರೆಸ್ ಪಕ್ಷವು ಅವರ ಅಭಿವೃದ್ಧಿಗೆ ದನಿಯಾಗಲಿದೆ. ಹಳ್ಳಿಹಳಿಗಳಿಗೆ ತೆರಳಿ ಅವರಿಹೆ ಸಹಾಯ ಹಸ್ತ ಚಾಚಿ ಜನಸಾಮಾನ್ಯರ ಕಣ್ಣಿರು ಒರೆಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳುವೈದ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣನಾಯ್ಕ , ಆರ್ ಎನ್ ನಾಯ್ಕ , ಉಸ್ತುವಾರಿಗಳಾದ ವಿ ಎಸ್ ಆರಾಧ್ಯ ಜಿ ವಿ ಭಾವಾ, ಶ್ರೀಮತಿ ವೆರೊನಿಕಾ, ಸುನಿತಾ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.