ಅಂಕೋಲಾ: ತಾಲೂಕಿನ ಬಿಳಿಹೊಂಯ್ಗಿ ಗ್ರಾಮದ ಉಪ್ಪಿನ ಆಗರದ ಖಾಲಿ ಜಾಗದಲ್ಲಿ ಕೋಳಿ ಅಂಕ ನಡೆಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೆÇಲೀಸರು ಓರ್ವನನ್ನು ಬಂಧಿಸಿದ್ದು ಇನ್ನೋರ್ವ ಪರಾರಿಯಾಗಿದ್ದಾನೆ.
ಬಿಳಿಹೊಂಯ್ಗಿ ನಿವಾಸಿ ವಿಠ್ಠಲ ತೋಕು ಹರಿಕಂತ್ರ(63) ಬಂಧಿತ ಆರೋಪಿಯಾಗಿದ್ದು ಇನ್ನೋರ್ವ ಆರೋಪಿ ಮೇಲಿನ ಮಂಜುಗುಣಿ ಗ್ರಾಮದ ಮಂಜುನಾಥ ನಾರಾಯಣ ನಾಯ್ಕ ಪರಾರಿಯಾಗಿದ್ದಾನೆ. ಬಂಧಿತರಿಂದ ಎರಡು ಬೈಕ್ ಹಾಗೂ ಆಟಕ್ಕೆ ಬಳಸುತ್ತಿದ್ದ 3 ಕೋಳಿ ಹುಂಜ, 4 ಕೋಳಿಕತ್ತಿ ಹಾಗೂ ರೂ.900 ನಗದು ಹಣವನ್ನು ವಶಪಡಿಕೊಂಡಿದ್ದಾರೆ. ಪಿ.ಎಸ್.ಐ ಪ್ರವೀಣಕುಮಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.