ಹೊನ್ನಾವರ: ಪಟ್ಟಣದ ರಾಯಲ್ ಕೇರಿಯ ಅಂಬೇಡ್ಕರ್ ಸಭಾಭವನದಲ್ಲಿ ಕರವೇ ಗಜ ಸೇನೆಯ ವತಿಯಿಂದ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಸಂಘಟನೆಯ ತಾಲೂಕಾ ಮಹಿಳಾ ಘಟಕ ಅಧಿಕೃತವಾಗಿ ಉದ್ಘಾಟನೆಗೊಂಡಿತು.
ಜಿಲ್ಲಾಧ್ಯಕ್ಷ ಉಮೇಶ್ ಹರಿಕಾಂತ ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ನಾಯ್ಕಅವರ ಸಮ್ಮುಖದಲ್ಲಿ ತಾಲೂಕಿನ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಮಹಿಳಾ ಘಟಕದ ತಾಲೂಕ ಕಾರ್ಯದರ್ಶಿಯಾಗಿ ಶೈಲಾ ಸುರೇಶ್ ನಾಯ್ಕ, ಕಾರ್ಯದರ್ಶಿಯಾಗಿ ರತ್ನ ರವಿ ನಾಯ್ಕ,ಗೌರವಾಧ್ಯಕ್ಷರಾಗಿ ಮಾಲಿನಿ ವೆಂಕಟೇಶ್ ನಾಯ್ಕ ನೇಮಕಗೊಂಡರು. ಹಾಗೂ ಹಲವಾರು ಕಾರ್ಯಕರ್ತರು ಸೇರ್ಪಡೆಗೊಂಡರು.
ಸಭೆಯಲ್ಲಿ ಕರವೇ ಗಜಸೇನೆ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ರೋಹಿಣಿ ಕಾರಳ್ಳಿ, ತಾಲೂಕಾ ಅಧ್ಯಕ್ಷ ಗಣೇಶ್ ನಾಯ್ಕ, ಜಿಲ್ಲಾ ಕೋಶಾಧ್ಯಕ್ಷ ನೀಲಕಂಠ ನಾಯ್ಕ,ಜಿಲ್ಲಾ ಮಾಧ್ಯಮ ವಕ್ತಾರ ರಾಜೇಶ್ ನಾಯ್ಕ,ಜಿಲ್ಲಾ ಸಂಚಾಲಕ ಕೇಶವ ಗೌಡ, ಸಂದೀಪ ನಾಯ್ಕ, ಸಂತೋಷ ನಾಯ್ಕ,ಸೀತಾರಾಮ ನಾಯ್ಕ,ಮಾರುತಿ ನಾಯ್ಕ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.