ಹೊನ್ನಾವರ : ವಾಣಿಜ್ಯ ಬಂದರು ಬೇಡವೇ ಬೇಡ ಎಂದು ಮೀನುಗಾರರು ಒಕ್ಕೊರಲಿನಿಂದ ಹೇಳಿದರೂ, ಖಾಸಗಿ ಕಂಪನಿ ಪರವಾಗಿ ಸರ್ಕಾರ, ಅಧಿಕಾರಿಗಳು ಮಾತನಾಡಿ ಕಾಸರಕೋಡ್ ನಲ್ಲಿ ವಾಣಿಜ್ಯ ಬಂದರು ಯೋಜನೆ ಯಾ ಅನುಷ್ಠಾನಕ್ಕೆ ಮುಂದಾಗುತ್ತಿದೆ. ಮೀನುಗಾರರ ಹೆಣದ ಮೇಲೆ ಯೋಜನೆ ಮಾಡಲೊರಟರೆ ಉಗ್ರವಾಗಿ ಖಂಡಿಸುತ್ತೇವೆ ಎಂದು ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯಾಧ್ಯಕ್ಷ ಬಾಬು ಮೋಗೇರ್ ಸರ್ಕಾರಕ್ಕೆ ಎಚ್ಚರಿಸಿದರು.
ವಾಣಿಜ್ಯ ಬಂದರು ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಡಿಸಿಯವರು ಯೋಜನೆಯ ಕಾಮಗಾರಿ ನಡೆಸುವ ಬಗ್ಗೆಯೆ ಹೇಳುತ್ತಾರೆ ವಿನಃ ಮೀನುಗಾರರ ಅವಹಾಲು ಸರಿಯಾಗಿ ಕೇಳಲಿಲ್ಲ. ಜನಜೀವನಕ್ಕೆ,ಪರಿಸರಕ್ಕೆ,ಜೀವ ಸಂಕುಲಕ್ಕೆ ಮಾರಕವಾಗುವ ಯೋಜನೆ, ಪರಿಸರಕ್ಕೆ ಸಂಬಂದಿಸಿದ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಕಾರ್ಯನಿರ್ವಹಿಸಲು ಮುಂದಾಗಿದೆ. ಸರ್ಕಾರ ಇಂತಹ ಖಾಸಗಿ ಕಂಪನಿ ಪರವಾಗಿ ವರ್ತಿಸುತ್ತಿದೆ.ಮೀನುಗಾರರು ಜಿಲ್ಲೆಯಾದ್ಯಂತ ಸೆಟೆದು ನಿಂಂತರೆ ಇದು ಅತಿರೇಖಕ್ಕೆ ತಿರುಗುತ್ತದೆ. ಮೀನುಗಾರರಿಗೆ ಎನೇ ತೊಂದರೆ ಆದರು ಜಿಲ್ಲಾಡಳಿತ,ಸರ್ಕಾರ ನೇರ ಹೊಣೆಯಾಗುತ್ತದೆ ಎಂದರು.
ರಾಷ್ಟ್ರೀಯ ಮೀನುಗಾರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೆಕರ ಮಾತನಾಡಿ ಮುಂದಿನ ದಿನಗಳಲ್ಲಿಯು ಸಹ ಮೀನುಗಾರರ ಬದುಕಿಗೆ ಮಾರಕವಾಗಬಲ್ಲ ಯೋಜನೆಯನ್ನು ಎಂದೆಂದು ವಿರೋಧಿಸುತ್ತೇವೆ ಎಂದರು. ಈ ಸಂದರ್ಭದಲ್ಲಿಮೀನುಗಾರ ಮುಖಂಡರು ಉಪಸ್ಥಿತರಿದ್ದರು.
ಸಂದಾನ ಸಭೆ ವಿಫಲ,ಕಾಮಗಾರಿಗೆ ಹೆಚ್ಚಿದ ವಿರೋಧ:
ವಾಣಿಜ್ಯ ಬಂದರು ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಮೀನುಗಾರ ಮುಖಂಡರೊಂದಿಗೆ ಸಭೆ ನಡೆಸಿರುವುದು ವಿಫಲವಾಗಿದೆ. ಸೋಮವಾರ ಕಂಪನಿ ಕಾಮಗಾರಿ ಆರಂಭವಾಗಲಿದ್ದು,ಜಿಲ್ಲಾಡಳಿತ 144 ಸೆಕ್ಷನ್ ಜಾರಿಗೊಳಿಸಿ ಕಾರ್ಯಾಚರಣೆಗೆ ಮುಂದಾಗಿತ್ತು. ಸೆಕ್ಷನ್ ಹಿಂಪಡೆಯಲಾಗಿದೆ.ಮಾಹಿತಿಗಳ ಪ್ರಕಾರ 500-600 ಪೋಲೀಸ್ ಸಿಬ್ಬಂದಿಗಳ ನಿಯೋಜನೆಯಾಗಿದೆ ಎನ್ನಲಾಗಿದೆ.