ಕಾರವಾರ: 2021ನೇ ಸಾಲಿನ ದಿವ್ಯಾಂಗರ ಬಸ್ ಪಾಸಗಳನ್ನು ಫೆ.28ರ ವರೆಗೂ ಮಾನ್ಯತೆ ಮಾಡಲಾಗಿರುತ್ತದೆ.
ವಿಕಲಚೇತನರ ಫಲಾನಿಭವಿಗಳಿಗೆ 2021 ನೇ ಸಾಲಿನಲ್ಲಿ ವಿತರಿಸಿರುವ ರಿಯಾಯಿತಿ ದರದ ಪಾಸ್‍ಗಳನ್ನು ಹಿಂತಿರುಗಿಸಿ ಸಂಬಂದಿಸಿದ ಘಟಕಗಳಲ್ಲಿ ರೂ.660/- ನಗದಾಗಿ ಅಥವಾ ಡಿಡಿ ರೂಪದಲ್ಲಿ ಪಾವತಿಸಿ ಫೆ. 28 ರ ವರೆಗೆ ಪಾಸುಗಳನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ.
ವಿಕಲಚೇತನರ ಬಸ್ ಪಾಸ್ ಪಡೆಯುವ ಫಲಾನುಭವಿಗಳು ಮಾಹಿತಿಯನ್ನು ಸೇವಾ ಸಿಂಧು ಪೋರ್ಟಲ್‍ನಲ್ಲಿ ದಾಖಲಿಸಿ ದಾಖಲಾತಿಗಳನ್ನು ಸಂಬಂಧಿಸಿದ ಪಾಸ್ ಕೌಂಟರಗಳಲ್ಲಿ ನೀಡಿ ಪಡೆಯುವುದು.
ಪಾಸುಗಳನ್ನು ಫೆ. 28 ರವರೆಗೆ ಮಾತ್ರ ನವೀಕರಣ ಮಾಡಲಾಗುವುದು. ನಂತರ ನವೀಕರಣಕ್ಕೆ ಅವಕಾಶವಿರುವುದಿಲ್ಲ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.