• Slide
    Slide
    Slide
    previous arrow
    next arrow
  • ಅತಿ ಹೆಚ್ಚು ಅನುದಾನ ತರುವಲ್ಲಿ ಭಟ್ಕಳ ನೌಕರರ ಸಂಘ ಯಶಸ್ವಿ

    300x250 AD

    ಭಟ್ಕಳ: ತಾಲೂಕಿನಲ್ಲಿ ಹಲವು ತಿಂಗಳಿನಿಂದ ಬಾಕಿ ಉಳಿಸಿದ್ದ ನೌಕರರ ವೈದ್ಯಕೀಯ ವೆಚ್ಚ ಮರುಪಾವತಿಯ ಅನುದಾನವನ್ನು ತಾಲೂಕು ನೌಕರರ ಸಂಘ ಶಾಸಕರ ನೆರವಿನಿಂದ ಶೀಘ್ರದಲ್ಲಿ ಮಂಜೂರಿ ಮಾಡಿಸಿ ತರುವಲ್ಲಿ ಯಶಸ್ವಿಯಾಗಿದೆ.

    ತಾಲೂಕಿನಲ್ಲಿ ನೌಕರರ ಅನುದಾನದ ಕೊರತೆಯು ತೀವ್ರವಾಗಿತ್ತು. ಇದನ್ನರಿತ ನಮ್ಮ ಭಟ್ಕಳ ತಾಲೂಕು ನೌಕರರ ಸಂಘವು ಭಟ್ಕಳ ತಾಲೂಕಿಗೆ ಅತಿ ಹೆಚ್ಚು ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದೆ. ಇದು ನೌಕರರ ವಲಯದಲ್ಲಿ ಸಂತಸವನ್ನು ತಂದಿದೆ. ಭಟ್ಕಳ ನೌಕರರ ಸಂಘವು ಈ ಸಂದರ್ಭದಲ್ಲಿ ಹರ್ಷವನ್ನು ವ್ಯಕ್ತಪಡಿಸಿದ್ದು, ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ನಮ್ಮ ನೌಕರರ ಸಂಘದ ಪ್ರಯತ್ನದ ಫಲವಾಗಿ ನಮ್ಮ ತಾಲೂಕಿಗೆ ರೂಪಾಯಿ 30.02 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷ ಮೋಹನ ನಾಯ್ಕ ತಿಳಿಸಿದರು.

    300x250 AD

    ಕಳೆದ ತಿಂಗಳು ಈ ವಿಷಯದ ಕುರಿತು ಶಾಸಕರ ಮೂಲಕ ಮನವಿಯನ್ನು ನಮ್ಮ ಸಂಘದ ವತಿಯಿಂದ ನೀಡಿದ್ದೆವು.ಇದಕ್ಕೆ ಶಾಸಕರು ಸ್ಪಂದಿಸಿ ಕೂಡಲೇ ಈ ಬಗ್ಗೆ ಶಿಕ್ಷಣ ಸಚಿವರಾದ ನಾಗೇಶ್ ರವರನ್ನು ಸಂಪರ್ಕಿಸಿ ಅನುದಾನದ ಬಿಡುಗಡೆಗೆ ಸಹಕರಿಸಿದ್ದಾರೆ.ನಮ್ಮ ಮನವಿಗೆ ಸ್ಪಂದಿಸಿದ ಶಾಸಕರಾದ ಸುನೀಲ್ ಬಿ ನಾಯ್ಕ್ ಸಚಿವರಾದ ಸಿ. ನಾಗೇಶರವರಿಗೆ ಹಾಗೂ ನಮ್ಮ ಕೇಂದ್ರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರಿಗೆ ನಮ್ಮ ಸಂಘ ಧನ್ಯವಾದಗಳನ್ನು ಸಲ್ಲಿಸುತ್ತದೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top