ಹೊನ್ನಾವರ: ಶಾಲಾ ದೈಹಿಕ ಶಿಕ್ಷಕಿಯ ಬಗ್ಗೆ ಪಾಲಕರು ಹಾಗೂ ಎಸ್‍ಡಿಎಂಸಿ ಮನವಿ ಮೇರೆಗೆ ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ವರ್ಗಾವಣೆಗೊಂಡ ಶಿಕ್ಷಕಿ ಮತ್ತೆ ಅದೇ ಶಾಲೆಗೆ ಆಗಮಿಸಲು ವಿದ್ಯಾರ್ಥಿಗಳನ್ನು ಎತ್ತಿಕಟ್ಟುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಇದೀಗ ತಾಲೂಕಿನ ಹಳದೀಪುರ ಶಾಲೆಯಲ್ಲಿ ಕೇಳಿಬರುತ್ತಿದ್ದು ಒಟ್ಟಾರೆ ವಿವಾದ ತಣ್ಣಗಾಯಿತೆಂದರೂ ತಣಿಯುತ್ತಿಲ್ಲ.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳದಿಪುರದ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಿಂದ ಶಾಲೆಯ ವಾತಾವರಣ ಹಾಳಾಗುತ್ತಿದೆ. ಇಂತಹ ಶಿಕ್ಷಕಿ ನಮ್ಮ ಶಾಲೆಗೆ ಬೇಡವೆಂದು ನಾವು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೆಲ ದಿನಗಳ ಹಿಂದೆ ಮನವಿ ನೀಡಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಅರಿತು ಮೇಲ್ನೊಟಕ್ಕೆ ಸಾಬಿತಾದ ಬೆನ್ನಲ್ಲೆ, ಈ ಹಿಂದಿನ ಶಾಲೆಯಲ್ಲಿ ಕರ್ತವ್ಯದ ವೇಳೆಯಲ್ಲಿ ಇಂತಹದೇ ಘಟನೆ ನಡೆದಿರುದರಿಂದ ಇಲ್ಲಿಯು ಪುನರಾವರ್ತನೆ ಆಗಿರುವುದನ್ನು ಮನಗಂಡು ಶಿಕ್ಷಕಿಯನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದರು.
ಈಗ ಶಿಕ್ಷಕಿ ತನ್ನ ಹಣ ಬಲ. ರಾಜಕೀಯದ ಪ್ರಭಾವ ಬಳಸಿ ಮತ್ತೆ ಇದೆ ಶಾಲೆಗೆ ಬಂದೇ ಬರುವೆನೆಂದು ಪಣತೊಟ್ಟಿದ್ದಾರೆ. ಇದರ ಆರಂಭಿಕವಾಗಿ ಕೆಲವು ಮಕ್ಕಳ ಪಾಲಕರಿಗೆ ಕರೆ ಮಾಡಿ ತನ್ನನ್ನು ಇದೆ ಶಾಲೆಗೆ ಕರೆಸಿಕೊಳ್ಳಿ, ಪಂಚಾಯಿತಿಗೆ, ಶಾಸಕರಿಗೆ, ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಿ ಎಂದು ಪ್ರಚೋದಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅರಿಯದ ಮುಗ್ದ ಪಾಲಕರನ್ನು ಬಳಸಿಕೊಳ್ಳುತ್ತಿರುವುದು ಎಸ್‍ಡಿಎಂಸಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಗಮನಕ್ಕೆ ಬರುತ್ತಿದ್ದಂತೆ ಕೂಡಲೇ ಶಾಲೆಯ ಹೆಸರು ಹಾಳಾಗಬಾರದು ಎನ್ನುವ ಉದ್ದೇಶದಿಂದ ಡಿಡಿಪಿಐ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಎಲ್ಲ ಮಾಹಿತಿಯನ್ನು ಒಳಗೊಂಡು ಮನವಿ ಸಲ್ಲಿಸಲು ತೀರ್ಮಾನಿಸಿ ಎಲ್ಲಾ ಅಧಿಕಾರಿಗಳಿಗೆ ಅಂಚೆ ಮೂಲಕ ಮನವಿ ಪತ್ರ ಹಾಗೂ ಸೂಕ್ತ ದಾಖಲೆಯನ್ನು ರವಾನಿಸಿದ್ದಾರೆ.
ಕೆಲ ದಿನದ ಹಿಂದೆ ನಡೆದ ನಮ್ಮ ಶಾಲೆಯ ಘಟನೆ ಶಿಕ್ಷಕಿಯ ವರ್ಗಾವಣೆ ಮೂಲಕ ತೆರೆ ಕಂಡಿತ್ತು. ಇದೀಗ ಮುಗ್ದ ಪಾಲಕರಿಗೆ ಕರೆ ಮಾಡಿ ಇಂತಹ ವರ್ತನೆ ಶಿಕ್ಷಕರಿಂದ ನಿರೀಕ್ಷೆ ಮಾಡಿರಲಿಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರಲಾಗುವುದು. ಈ ವಿಷಯದಲ್ಲಿ ಹಣ ಬಲ, ರಾಜಕೀಯ ನುಸುಳಿದರೆ ಸಮಾನ ಮನಸ್ಕ ಗ್ರಾಮಸ್ಥರು, ಶಾಲೆಯ ಪೂರ್ವ ವಿದ್ಯಾರ್ಥಿಗಳು ಒಗ್ಗೂಡಿ ಹೋರಾಟ ನಡೆಸಲು ಸಜ್ಜಾಗುತ್ತಿದ್ದೇವೆ.