ಶಿರಸಿ: ಉಪೇಂದ್ರ ಪೈ ಸೇವಾ ಟ್ರಸ್ಟ ವತಿಯಿಂದ ಸರಕಾರಿ ಪ್ರೌಢಶಾಲೆ ಇಸಳೂರಿನ 340 ವಿದ್ಯಾರ್ಥಿಗಳಿಗೆ ತಲಾ ಎಂಟು ಪಟ್ಟಿಯನ್ನು ಶಿರಸಿಯ ಉದ್ಯಮಿ ಉಪೇಂದ್ರ ಪೈ ವಿತರಿಸಿದರು.
“ಪರಿಶ್ರಮವೇ ಜೀವನ” ಎಂಬ ಧ್ಯೇಯ ವಾಕ್ಯದ ಸಂಪೂರ್ಣ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗಿರುವ ವಿಫುಲ ಅವಕಾಶಗಳನ್ನು ಸದ್ಯಬಳಕೆ ಮಾಡಿಕೊಂಡು ದುಶ್ಚಟಗಳಿಗೆ ಬಲಿಯಾಗದೆ ಭವಿಷ್ಯ ರೂಪಿಸಿಕೊಳ್ಳಲು ಹಿತ ವಚನ ನೀಡಿದರು. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಆರ್ಥಿಕ ತೊಂದರೆಯಿದ್ದಲ್ಲಿ ಅಂತವರಿಗೆ ಟ್ರಸ್ಟನ ವತಿಯಿಂದ ಶಿಕ್ಷಣ ನೀಡಲು ಬದ್ಧರಾಗಿದ್ದೇವೆ ಎಂದರು.
ಶಾಲಾಭಿವೃದ್ಧಿ ಸಮಿತಿ, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದದವರು ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಉಪೇಂದ್ರ ಪೈ ಯವರಿಗೆ ಅಭಿವಂದನೆ ಸಲ್ಲಿಸಿದರು.