ಶಿರಸಿ: ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಇ.ಎಸ್.ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಇಬ್ಬರು ಎನ್.ಸಿ.ಸಿ. ವಿದ್ಯಾರ್ಥಿಗಳು ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಲಿರುವ ವಿದ್ಯಾರ್ಥಿಗಳಾದ ಶರತ್ ನಾಯ್ಕ ಮತ್ತು ಎಲಿಶ್ ರೊಡ್ರಿಗ್ಸ ಇಬ್ಬರೂ ಒಂದೇ ಸಂಸ್ಥೆಯ ಕೆಡೆಟ್‍ಗಳಾಗಿದ್ದು ವಿಶೇಷ. ಈ ಇಬ್ಬರು ಎನ್.ಸಿ.ಸಿ. ಅಧಿಕಾರಿ ಡಾ.ಟಿ.ಎಸ್.ಹಳೆಮನೆ ಇವರ ನೇತ್ರತ್ವದಲ್ಲಿ ತರಬೇತಿಯನ್ನು ಪಡೆದಿದ್ದು,
ಸುಮಾರು ಮೂರು ತಿಂಗಳ ಕಾಲ ಬೇರೆ ಬೇರೆ ಕಡೆ ಕಠಿಣ ತರಬೇತಿ, ಕ್ಯಾಂಪ್‍ಗಳನ್ನು ಮುಗಿಸಿದ ಈ ವಿದ್ಯಾರ್ಥಿಗಳ ಸಾಧನೆಗೆ ಎಂ.ಇ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಕಾಲೇಜು ಸಮಿತಿ ಚೇರ್ಮನ್ ಪ್ರೊ.ಎಂ.ಎಂ.ಹೆಗಡೆ ಬಕ್ಕಳ, ಪ್ರಾಚಾರ್ಯೆ ಡಾ. ಕೋಮಲಾ ಭಟ್ಟ ಹಾಗೂ ಕಾರವಾರ ಜಿಲ್ಲಾ ಎನ್.ಸಿ.ಸಿ. ಕಮಾಂಡಿಂಗ್ ಆಫೀಸರ ಲೆಪ್ಟಿನೆಂಟ ಕರ್ನಲ್ ಸಮೀರ ಪವಾರ, ಎ.ಓ.ನಾಯರ್ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು, ಸಿಬ್ಬಂದಿಗಳು ಸಂತಸ ವ್ಯಕ್ತಪಡಿಸಿದ್ದಾರೆ.