ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದುಹೋಗುವ ಬಿಡಾಡಿ ಜಾನುವಾರುಗಳು ಸಂಚರಿಸುವ ವಾಹನಕ್ಕೆ ಅಡ್ಡಲಾಗಿ ಬಲಿಯಾಗುತ್ತಿದ್ದು, ಇದರಿಂದ ಪದೇ ಪದೇ ಹೆದ್ದಾರಿಯಲ್ಲಿ ಸಂಚಾರ ಅನಾನೂಕೂಲತೆ, ಅಪಘಾತಕ್ಕೂ ಕಾರಣವಾಗುತ್ತಿದೆ.
ಇಲ್ಲಿನ ಕರ್ಕಿ, ಸಾಲಿಕೇರಿ, ಹಳದಿ ಪುರ, ಕಾಸರಕೋಡ, ಅಪ್ಪರ ಕೊಂಡ, ಗುಣವಂತೆ ಸೇರಿದಂತೆ ಮತ್ತಿತರೆಡೆ ಬಿಡಾಡಿ ದನಗಳು ಹಾಗೂ ಸ್ಥಳೀಯರ ಮನೆಯ ಗೋವುಗಳು ಬೆಳಗ್ಗೆ, ಮಧ್ಯಾಹ್ನ, ಸಂಜೆಯೆನ್ನದೆ ರಾಷ್ಟ್ರೀಯ ಹೆದ್ದಾರಿಯಲ್ಲಿರುತ್ತವೆ. ಹಗಲಿನಲ್ಲಿ ಜಾನುವಾರು ರಸ್ತೆಯಲ್ಲಿರುವುದು ಕಂಡುಬರುವುದರಿಂದ ವಾಹನ ವಾಹನಗಳ ವೇಗ ಮಿತಿಗೊಳಿಸಿಗೊಂಡು ತೆರಳುತ್ತಾರೆ. ಆದರೆ, ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಇರುವುದು ಗೋಚರಿಸದ ಕಾರಣ ಪದೇಪದೆ ಅಪಘಾತಗಳು ಸಂಭವಿಸುವಂತಾಗಿದೆ. ಸಣ್ಣವಾಹನಗಳು ವಾರುಗಳಿಗೆ ಡಿಕ್ಕಿ ಹೊಡೆದ ಸಂದರ್ಭದಲ್ಲಿ ವಾಹನ ಸವಾರರಿಗೆ ಗಾಯಗಳಾಗುವುದಲ್ಲದೇ ಗೋವುಗಳು ಸಹ ಮೃತಪಟ್ಟಿರುವುದಿದೆ. ಆದಷ್ಟು ಶೀಘ್ರ ಇದಕ್ಕೊಂದು ಪರಿಹಾರ ಕಂಡುಹಿಡಿದು, ಸಮಸ್ಯೆ ಪರಿಹರಿಸಿಕೊಡಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.