ಕಾರವಾರ: ತಾಲೂಕಿನ ವೈಲವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾರ್ಗೆ ಜೂಗದಿಂದ ಸ್ಮಶಾನದವರೆಗೆ ಒಂದುಕೋಟಿ ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮವನ್ನು ಶಾಸಕಿ ರೂಪಾಲಿ ನಾಯಕ ನೆರವೇರಿಸಿದರು.
ಪ್ರವಾಹ ಬಂದಾಗಲೆಲ್ಲ ಇಲ್ಲಿಯ ಜನರ ಸ್ಥಳಾಂತರ ಮಾಡುವಾಗ ಹಲವು ಸಮಸ್ಯೆ ಎದುರಿಸುತ್ತಿದ್ದರು. ಈ ರಸ್ತೆ ನಿರ್ಮಾಣವಾಗಬೇಕು ಎಂಬುದು ಇಲ್ಲಿಯ ಜನರ ಬಹಳ ವರ್ಷಗಳ ಬೇಡಿಕೆ ಹಾಗೂ ಕನಸು ಕೂಡ ಆಗಿತ್ತು. ಈಗ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ. ಇಲ್ಲಿಯ ಜನರಿಗೆ ಶೀಘ್ರದಲ್ಲಿ ರಸ್ತೆ ಬಳಕೆಗೆ ಸಿಗಲಿದೆ. ಈ ಹಿಂದೆ ಮಾನ್ಯ ಸಂಸದರು ಸೇತುವೆಯನ್ನು ನಿರ್ಮಾಣ ಮಾಡಿದ್ದರು. ಆದರೆ, ಸಂಪರ್ಕ ರಸ್ತೆಯಿಲ್ಲದೆ ಜನರು ಪರದಾಡುತ್ತಿದ್ದರು. ಈಗ ಈ ರಸ್ತೆ ನಿರ್ಮಾಣಕ್ಕೆ ಒಂದು ಕೋಟಿ ಅನುದಾನವನ್ನು ಒದಗಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಿನ್ನರ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಸೇರಿದಂತೆ ಊರಿನ ಮುಖಂಡರು ಉಪಸ್ಥಿತರಿದ್ದರು.