
ಯಲ್ಲಾಪುರ : ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ಕಾರ್ಯಾಲಯದಲ್ಲಿ, ಪ್ರಕೃತಿ ವಿಕೋಪದಿಂದ ಮೃತಪಟ್ಟ ಭರತನಹಳ್ಳಿ ಗ್ರಾಮದ ಮಹಾಬಲೇಶ್ವರ ಮಾರ್ಯಾ ನಾಯ್ಕ ಅವರ ಕುಟುಂಬಸ್ಥರಿಗೆ ಸುಮಾರು 4 ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್ ಅನ್ನು ವಿತರಿಸಿದರು.
ಕಳೆದ ತಿಂಗಳು ತಾಲೂಕಿನ ಜಕ್ಕೊಳ್ಳಿ ಗ್ರಾಮದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಸರಿತಾ ಆದಿತ್ಯಾ ನಾಯ್ಕ, ಗೌರಿ ಶಿವಾ ನಾಯ್ಕ ಹಾಗೂ ಶ್ವೇತಾ ಶಿವಾ ನಾಯ್ಕ ಅವರ ಕುಟುಂಬಸ್ಥರಿಗೆ ತಲಾ 1 ಲಕ್ಷ ರೂಪಾಯಿಗಳನ್ನು ಪರಿಹಾರದ ಧನದ ಚೆಕ್ ಅನ್ನು ಮಾನ್ಯ ಸಚಿವರು ಈ ಸಂದರ್ಭದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್, ಪ್ರಮುಖರಾದ ಶ್ರೀ ವಿಜಯ ಮಿರಾಶಿ ಹಾಗೂ ಕಂದಾಯ ಇಲಾಯೆಯ ಅಧಿಕಾರಿಗಳು ಫಲಾನುಭವಿಗಳು ಹಾಜರಿದ್ದರು.